ಬೆಂಗಳೂರು[ಡಿ.25]  ಮೂರು ತಿಂಗಳ ಹಸುಗೂಸು ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.  ಮಗುವನ್ನು ಕೊಂದ ಆರೋಪದ ಮೇಲೆ ಮಗುವಿನ ಅಜ್ಜಿಯನ್ನೇ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಎರಡು ಗಂಡು ಮಕ್ಕಳು ಬೇಡ ಒಂದೇ ಗಂಡು ಮಗು ಸಾಕು ಎಂದು ಹತ್ಯೆ ಮಾಡಿದ್ದಾಗಿ ಹೇಳಲಾಗಿದೆ. ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದ ಮೇಲೆ ಅಜ್ಜಿ ವಿಜಯಲಕ್ಷೀ ಬಂಧನವಾಗಿದೆ.

ಮಗುವಿನ ತಂದೆಗೆ ಕೆಲಸ ಇರಲಿಲ್ಲ. ಮಗುವಿಗೆ ಅನಾರೋಗ್ಯಕಾಡುತ್ತಿತ್ತು. ಮಗುವಿಗೆ ಪದೇ ಪದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಣ ಖರ್ಚು ಮಾಡಬೇಕಿತ್ತು. ಹಣ ಖರ್ಚು ಮಾಡೋದಕ್ಕೆ ಮಗುವಿನ ಅಜ್ಜಿಯೇ ಕೊಡಬೇಕಿತ್ತು. ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಥಾ ಹೇಳಿಕೆ ಕೊಟ್ರಿ ಶಾಸಕರೆ... ಗ್ರಾಮ ಲೆಕ್ಕಾಧಿಕಾರಿ ಕೊಲೆ ನಿಮಗೆ ಏನೂ ಅಲ್ವೆ?

ಡಿ. 21ರ ರಾತ್ರಿ ಮಗು ಜ್ವರದಿಂದ ಬಳಲುತ್ತಿತ್ತು. ತಂದೆ ಕಾರ್ತಿಕ್​ ಮಗುವನ್ನು ಹಾಲ್​ನಲ್ಲಿ ಮಲಗಿಸಿ ಔಷಧಿ ತರಲೆಂದು ಮೆಡಿಕಲ್​ ಶಾಪ್​ಗೆ ತೆರಳಿದ್ದರು. ಅವರ ಪತ್ನಿ ಮತ್ತೊಂದು ಮಗುವಿಗೆ ಹಾಲು ಕುಡಿಸಿದ ನಂತರ ಹಾಲ್​ನಲ್ಲಿದ್ದ ಮಗುವಿನ ಬಳಿ ಬಂದಾಗ ಮಗು ನಾಪತ್ತೆಯಾಗಿರುವುದು ಕಂಡು ಬಂದಿತ್ತು. ನಂತರ ಪರಿಶೀಲನೆ ನಡೆಸಿದಾಗ ಮಗುವನ್ನು ಟವಲ್​ನಲ್ಲಿ ಸುತ್ತಿ ಮಂಚದ ಕೆಳಗೆ ಇಟ್ಟಿರುವುದು ಕಂಡು ಬಂದಿದ್ದು ಮಗು ಸಾವನ್ನಪ್ಪಿತ್ತು.