Asianet Suvarna News Asianet Suvarna News

ಪ್ರಜ್ಞಾಹೀನ ಸ್ಥಿತಿಯಲ್ಲಿ ವಿಜಯಪುರದ ಮಾಜಿ ಕಾರ್ಗಿಲ್‌ ಯೋಧ!

ಪ್ರಜ್ಞಾಹೀನ ಸ್ಥಿತಿಯಲ್ಲಿ ಮಾಜಿ ಕಾರ್ಗಿಲ್‌ ಯೋಧ| ಕಾರ್ಗಿಲ್‌, ಅರುಣಾಚಲ, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಸೈನಿಕನಿಗೆ ಬೇಕಿದೆ ನೆರವು| ಪ್ರವೀಣ್‌ ಘೋರ್ಪಡೆ

Belagavi Ex Army Officer Fought In Kargil War Fell Unconscious
Author
Bangalore, First Published Jan 20, 2020, 7:44 AM IST

ಪ್ರವೀಣ್ ಘೋರ್ಪಡೆ

ತಾಳಿಕೋಟೆ[ಜ.20]:
 ಸುಮಾರು 16 ವರ್ಷಗಳ ಕಾಲ ದೇಶದ ಗಡಿಯಲ್ಲಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ವೀರಯೋಧನಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದ ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದ ಮಾಜಿ ಕಾರ್ಗಿಲ್‌ ಯೋಧ ಇಂದು ಹೈಪೋಸಿಸ್‌ ಬ್ರೈನ್‌ ಇಂಜೂರಿಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಜೋಧ್‌ಪುರ್ ವಾಯುನೆಲೆಯಲ್ಲಿ 'ಬಹದ್ದೂರ್' ಕೊನೆ ಹಾರಾಟ: ಇತಿಹಾಸ ಪುಟ ಸೇರಿದ ಮಿಗ್‌-27!

ತಾಳಿಕೋಟೆ ಪಟ್ಟಣದ ಸೇವಾಲಾಲ್‌ ಬಡಾವಣೆಯ ನಿವಾಸಿ ಸುನೀಲ ಬಸವಂತಪ್ಪ ರಾಠೋಡ(40) ಎಂಬ ಮಾಜಿ ಯೋಧ ದೇಶಸೇವೆಗಾಗಿ ಅರುಣಾಚಲ ಪ್ರದೇಶ, ಕಾಶ್ಮೀರ, ರಾಜಕೋಟ, ಸಿಯಾಚೀನ್‌, ಕಾರ್ಗಿಲ್‌ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿ 7 ವರ್ಷಗಳ ಹಿಂದೆ ಸೇವಾ ನಿವೃತ್ತಿ ಪಡೆದಿದ್ದಾರೆ. ಸೇವಾ ನಿವೃತ್ತಿಯ ನಂತರ ಬ.ಬಾಗೇವಾಡಿ ತಾಲೂಕಿನ ಕೂಡಗಿಯ ಎನ್‌ಟಿಪಿಸಿಯಲ್ಲಿ ಸೂಪರ್‌ ವೈಸರ್‌ ಆಗಿ ಕೆಲಸ ಮಾಡುತ್ತಾ ತನ್ನ ಕುಟುಂಬದೊಂದಿಗೆ ಜೀವನಸಾಗಿಸುತ್ತಿದ್ದರು.

ಆದರೆ, ಕಳೆದ 4 ತಿಂಗಳ ಹಿಂದೆ ಕೂಡಗಿ ಎನ್‌ಟಿಪಿಸಿ ಕೆಲಸದ ಮೇಲೆ ಇರುವಾಗಲೇ ಹೈಪೋಸಿಸ್‌ ಬ್ರೈನ್‌ ಇಂಜೂರಿ ರೋಗ ತಗುಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಬೆಂಗಳೂರಿನ ಮನಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 25 ದಿನಗಳವರೆಗೆ ಚಿಕಿತ್ಸೆ ನೀಡಿ ಸರ್ಕಾರದ ಸೌಲಭ್ಯ ಇಲ್ಲಿಗೆ ಸ್ಥಗಿತಗೊಂಡಿದೆ.

ಮಣಿಪುರದಲ್ಲಿ ಹೃದಯಾಘಾತದಿಂದ ಬೆಳಗಾವಿ ಮೂಲದ ಯೋಧ ಸಾವು

ನಂತರ ಕುಟುಂಬದವರು ಕಮಾಂಡೋ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಬೆಡ್‌ ಖಾಲಿ ಇಲ್ಲ, ಇಲ್ಲಿ ಆ ರೀತಿ ವ್ಯವಸ್ಥೆಗಳಿಲ್ಲ ಎಂದು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ದಿಕ್ಕು ತೋಚದೆ ಕುಟುಂಬಸ್ಥರು ವಿಜಯಪುರದ ಬಿಎಲ್‌ಡಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಲ ಮಾಡಿ ಸುಮಾರು 20 ಲಕ್ಷ ವೆಚ್ಚಮಾಡಿದ್ದಾರೆ.

ಈ ಯೋಧನಿಗೆ ಸಹಕರಿಸಲು ಈ ಕೆಳಗಿನ ಅಕೌಂಟ್ ನಂಬರ್‌ಗೆ ಹಣ ಕಳುಹಿಸಬಹುದು...

Belagavi Ex Army Officer Fought In Kargil War Fell Unconscious

Follow Us:
Download App:
  • android
  • ios