ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತುಮಕೂರಿನಲ್ಲಿ ಭಜರಂಗದಳ ಹಾಗೂ ವಿಎಚ್‌ಪಿ ಪ್ರತಿಭಟನೆ

* ಕಾಳಿ ಮಠದ ಶ್ರೀ ರಿಷಿ ಕುಮಾರ ಸ್ವಾಮೀಜಿ ಪ್ರತಿಭಟನೆಯಲ್ಲಿ ಭಾಗಿ
* ಇಸ್ಲಾಮಿಕ್ ಭಯೋತ್ಪಾದಕರ ಭಾವ ಚಿತ್ರ ಹರಿದು ಸ್ವಾಮೀಜಿ ಆಕ್ರೋಶ
* ಟೌನ್ ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ

bajrang dal and vhp protest over praveen nettaru murder in tumakuru gvd

ತುಮಕೂರು (ಜು.29): ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಕಿಚ್ಚು ತಣ್ಣಾಗಾಗುವ ಲಕ್ಷಣ ಕಾಣುತ್ತಿಲ್ಲ. ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಹೋರಾಟ ಮುಂದುವರಿದೆ. ಕಲ್ಪತರು ನಾಡು ತುಮಕೂರಿನಲ್ಲಿ ಪ್ರವೀಣ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಾಯ್ತು. ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆ ಹಿಂದೂಗಳನ್ನ ಕೆರಳಿಸುವಂತೆ ಮಾಡಿದೆ. 

ಇದನ್ನ ಖಂಡಿಸಿ ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಳಿ ಮಠದ ಶ್ರೀ ರಿಷಿಕುಮಾರ ಸ್ವಾಮಿಜಿ ಹಿಂದೂ ಭಯೋತ್ಪಾದಕ ಭಾವಚಿತ್ರಗಳನ್ನು ಹರಿದು ಹಾಕಿದರು. ಕಾಲಿನಲ್ಲಿ ತುಳಿದರು. ಇಷ್ಟೇ ಅಲ್ಲದೆ ಬೆಂಕಿ ಇಟ್ಟು ತಮ್ಮ ಸಿಟ್ಟು ಹೊರ ಹಾಕಿದರು. ಬಿಜೆಪಿ ಕಾರ್ಯಕರ್ತರೇ ಹೆಚ್ಚು ಹತ್ಯೆಯಾಗುತಿದ್ದಾರೆ. ನಿಮಗೆ ಧಮ್ ಇದ್ರೆ ನನ್ನ ಹೊಡಿರೋ. ನನ್ನ ಯಾವತ್ತು ಹೊಡಿತಿರೋ ಅವತ್ತು ನಿಮ್ಮ ಕೊನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. 

ಜಾತಿ, ಧರ್ಮದ ಹೆಸರಲ್ಲಿ ಆಗೋಚರ ಯುದ್ಧ ನಡೆಯುತ್ತಿದೆ: ಸೊಗಡು ಶಿವಣ್ಣ

ಇನ್ನು ಟೌನ್‌ಹಾಲ್ ವೃತ್ತದಲ್ಲಿ ಸುಮಾರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಎದುರಾಗಿತ್ತು. ಟೌನ್ ಹಾಲ್ ಬಳಿ ಪ್ರವೀಣ್ ನೆಟ್ಟಾರೆ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ. ಮುಸ್ಲಿಂ ವ್ಯಾಪಾರಸ್ಥರ ಬಳಿ ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇನ್ನು ಇದೇ ವೇಳೆ ಸರ್ಕಾರದ ಗೃಹಸಚಿವರ ಹಾಗೂ ಮುಖ್ಯಮಂತ್ರಿಗಳ ವಿರುದ್ದ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಹರಿಹಾಯ್ದರು.

ಪ್ರವೀಣ್ ಹತ್ಯೆ ಖಂಡಿಸಿ ತಿಪಟೂರಿನಲ್ಲಿ ಬಂದ್: ದಕ್ಷಿಣ ಕನ್ನಡದ ಸುಳ್ಯದಲ್ಲಿ ಮಂಗಳೂರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಇಂದು ಭಜರಂಗದಳ ಹಾಗೂ ಹಿಂದೂ ಹಿತರಕ್ಷಣಾ ಸಮಿತಿ ಕರೆ ನೀಡಿರುವ ತಿಪಟೂರು ನಗರ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದರೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಆಗಮಿಸಿ ಮತ್ತೆ ಹಿಂದಿರುಗುತ್ತಿರುವುದು ಕಂಡುಬರುತ್ತಿದೆ. 

ಹೆಚ್ಚಿತು Praveen Nettaru ಹತ್ಯೆ ಕಿಚ್ಚು, ತುಮಕೂರು ಬಿಜೆಪಿಯಲ್ಲಿ ಮುಂದುವರೆದ ರಾಜೀನಾಮೆ!

ಒಟ್ಟಾರೆ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನಲೆ ನೂರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ತುಮಕೂರು ನಗರ ಅಲ್ಲದೆ ಇಡೀ ಜಿಲ್ಲೆಯಾದ್ಯಂತ ಹಿಂದೂ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಆದರೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅದ್ರೂ ಹಿಂದೂಪರ ಕಾರ್ಯಕರ್ತರ ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರ ಹತ್ಯೆ ನಿಜಕ್ಕೂ ಇಂದಿನ ಪ್ರತಿಭಟನಕಾರರನ್ನು ಕೆರಳಿಸಿದಂತು ಸುಳ್ಳಲ್ಲ.

Latest Videos
Follow Us:
Download App:
  • android
  • ios