Asianet Suvarna News Asianet Suvarna News

ಕೊರೋನಾ ಕೂಡ ಅಸ್ತ್ರವಾಯಿತೆ? ತಬ್ಲಿಘೀ ಕುರಿತು ಸಂಸದ ಕಿಡಿ

ಸಂಸದ ಅನಂತಕುಮಾರ್‌ ಹೆಗಡೆ ತಬ್ಲಿಘೀ ಸಂಘಟನೆ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘವಾದ ಬರಹ ಪ್ರಕಟಿಸಿದ್ದು, ತಬ್ಲಿಘೀ ಜಮಾತ್‌ ಸದಸ್ಯರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

 

Anant Kumar Hegde facebook post slams tabliqhis
Author
Bangalore, First Published Apr 9, 2020, 12:43 PM IST

ಕಾರವಾರ(ಏ.09): ಸಂಸದ ಅನಂತಕುಮಾರ್‌ ಹೆಗಡೆ ತಬ್ಲಿಘೀ ಸಂಘಟನೆ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘವಾದ ಬರಹ ಪ್ರಕಟಿಸಿದ್ದು, ಅದು ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

ಹೆಗಡೆ ಬರಹದಲ್ಲಿನ ಕೆಲವು ಅಂಶಗಳು ಹೀಗಿವೆ.

ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತ ಮಾರಣಹೋಮ ಎಸಗುತ್ತಿರುವ ಕೊರೋನಾ ವೈರಸ್‌ ಮತ್ತು ಅದೇ ರೀತಿ ವೇಗವಾಗಿ ವೃದ್ಧಿಗೊಳ್ಳುತ್ತಾ ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೆ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್‌. ಈ ಎರಡಕ್ಕೂ ಹೋಲಿಕೆ ಇದೆ.

ಆರು ಸಾವಿರಕ್ಕೂ ಹೆಚ್ಚು ತಬ್ಲಿಘೀ ಜಮಾತ್‌ ಸದಸ್ಯರು ಹರ್ಕತ್‌ ಉಲ್‌ ಮುಜಾಹಿದ್ದೀನ್‌ ಕ್ಯಾಂಪ್‌ಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಇವರೆಲ್ಲ ತಾಲಿಬಾನ್‌ ಸಂಘಟನೆ ಸೇರಿ ರಷ್ಯಾ ವಿರುದ್ಧ ಹೋರಾಡಿದ್ದರು.

ಉತ್ತರ ಕನ್ನಡ: ಅಕ್ಕನ ಮಗಳನ್ನೇ ಕೊಂದ ತಂಗಿ

ಇಸ್ಲಾಮಿಕ್‌ ಮೂಲಭೂತವಾದಿಗಳ ಕೈಯಲ್ಲಿ ಕೊರೋನಾದಂತಹ ಅಪಾಯಕಾರಿ ವೈರಾಣು ಕೂಡ ಒಂದು ಅಸ್ತ್ರವಾಯಿತೆ? ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೆ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ದಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೆ ಎಂದು ಅನಂತಕುಮಾರ್‌ ಹೆಗಡೆ ತಮ್ಮ ಬರಹದಲ್ಲಿ ಪ್ರಶ್ನಿಸಿದ್ದಾರೆ.

ಜತೆಗೆ ತಬ್ಲಿಘೀ ಜಗತ್ತಿನ ವಿವಿಧೆಡೆ ಮತಾಂತರಕ್ಕೆ ನಡೆಸಿದ ಪ್ರಯತ್ನ, ಭಯೋತ್ಪಾದನೆ ಸಂಘಟನೆ ಜತೆ ಕೈಜೋಡಿಸಿದ್ದು ಸೇರಿದಂತೆ ಇಡಿ ತಬ್ಲಿಘೀ ಸಂಘಟನೆಯ ಇತಿಹಾಸವನ್ನು ಕೆದಕಿದ್ದಾರೆ.

Follow Us:
Download App:
  • android
  • ios