ಘೀರ್ ಗೋವುಸಾಕಾಣಿಕೆ; ಐಟಿ ಉದ್ಯೋಗಿಯ ಬದುಕು ಹಸನು!
- ಘೀರ್ ಗೋವುಗಳ ಸಾಕಾಣಿಕೆಯಲ್ಲಿ ಖುಷಿ ಕಂಡ ಐಟಿ ಉದ್ಯೋಗಿ
- ಬಿಡುವಿಲ್ಲದ ಕೆಲಸದ ನಡುವೆ ಆಕಳುಗಳ ಸಾಕಾಣಿಕೆ
- ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರೇರಣೆ
- ಲಾಭದಾಯಿಕ ಘೀರ್ ಆಕಳು ಸಾಕುವಂತೆ ರೈತರಿಗೆ ಸಲಹೆ
ಕೆ.ಎಂ.ಮಂಜುನಾಥ್
ಬಳ್ಳಾರಿ (ನ. 26) : ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಹಸನಾಗಿಸಿಕೊಂಡಿದ್ದಾರೆ. ಅದೂ ದೇಶಿ ತಳಿಯ ಘೀರ್ ಹಸುಗಳನ್ನು ಸಾಕಿ ಭರ್ಜರಿಯಾಗಿ ಹಾಲು, ಮೊಸರು, ತುಪ್ಪದ ವ್ಯವಸಾಯ ಮಾಡುವುದರ ಜೊತೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.
ನಗರದ ನಿವಾಸಿ ಬಸವರಾಜ ಚಿರತನಾಳ್ ಕೃಷಿಯೆಡೆಗೆ ಮನಸ್ಸು ಹಾಯಿಸಿದ್ದು ಬರೀ ಲಾಭದ ದೃಷ್ಟಿಯಿಂದಲ್ಲ. ಹೆಚ್ಚುತ್ತಿರುವ ಔಷಧಿ-ರಸಗೊಬ್ಬರಗಳ ಬಳಕೆಯಿಂದ ಭೂಮಿ ಬರಡಾಗುವ ಅಪಾಯದಿಂದ ಪಾರು ಮಾಡಬೇಕು. ನಮ್ಮ ಕೈಲಾದಷ್ಟುಸಾವಯವ ಇಂಗಾಲ ಹೆಚ್ಚಿಸಲು ಪ್ರಯತ್ನಿಸಬೇಕು ಎಂಬ ಕಾಳಜಿಯಿಂದ. ಜತೆಗೆ ಘೀರ್ ಹಸುಗಳನ್ನು ಸಾಕಿ, ದೇಸಿ ತಳಿಗಳನ್ನು ರಕ್ಷಣೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯ ಕಾಳಜಿಯ ಕಾರ್ಯ, ಐಟಿ ಉದ್ಯೋಗದ ಜತೆಗೆ ಕೃಷಿ ಕೆಲಸದಲ್ಲಿ ಬಿಡುವಿಲ್ಲದಂತೆ ಮಾಡಿದೆ. ಇದು ಅವರ ನೆಮ್ಮದಿಯ ಜೀವನಕ್ಕೂ ಆಸ್ಪದ ಒದಗಿಸಿದೆ.
Ballari News: ಅರೆಬರೆ ರಸ್ತೆ ಅಗಲೀಕರಣ ರೊಚ್ಚಿಗೆದ್ದ ಗ್ರಾಮಸ್ಥರು
ಕೃಷಿ ಆಸಕ್ತಿ ಬಂದದ್ದು ಹೀಗೆ:
ಬಸವರಾಜ ಅವರಿಗೆ ಸಾವಯವ ಕೃಷಿ ಹಾಗೂ ಘೀರ್ ಹಸುಗಳ ಸಾಕಾಣಿಕೆಗೆ ಆಸಕ್ತಿ ಮೂಡಿದ್ದು ಹಾವೇರಿಯಲ್ಲಿರುವ ಗೆಳೆಯ ಸಂಜೀವರೆಡ್ಡಿ ಅವರು ಕೈಗೊಂಡಿರುವ ದೇಸಿ ಹಸು ಸಾಕಾಣಿಕೆ, ಸಾವಯವ ಕೃಷಿಯ ಪದ್ಧತಿಯಿಂದ. ದೇಸಿ ಆಕಳುಗಳನ್ನು ಸಂರಕ್ಷಣೆ ಮಾಡಬೇಕು ಎಂದು ಮನಸ್ಸಾಗುತ್ತಿದ್ದಂತೆಯೇ ಘೀರ್ ಹಸುಗಳ ಹುಡುಕಾಟ ನಡೆಸಿದ ಬಸವರಾಜ್, ಗುಜರಾತ್‌ಗೂ ತೆರಳಿ ಘೀರ್ ತಳಿಗಳ ಕುರಿತು ಸಾಕಷ್ಟುಮಾಹಿತಿ ಸಂಗ್ರಹಿಸಿದ್ದಾರಲ್ಲದೆ, ಸಾಕಾಣಿಕೆಯಿಂದಾಗುವ ಲಾಭ-ನಷ್ಟದ ಬಗ್ಗೆಯೂ ಮಾಹಿತಿ ಪಡೆದು ಕೊನೆಗೂ ಗೋವು ಸಾಕಾಣಿಕೆಯ ನಿರ್ಧಾರ ಕೈಗೊಂಡಿದ್ದಾರೆ. ಇವರ ದೇಸಿ ತಳಿಗಳ ರಕ್ಷಣೆಯ ಕಾಳಜಿಯ ಕಾರ್ಯಕ್ಕೆ ನಗರದ ಖ್ಯಾತ ಲೆಕ್ಕ ಪರಿಶೋಧಕ ಕೆ. ರಾಜಶೇಖರ್ ಸಾಥ್ ನೀಡಿದ್ದಾರೆ.
ನಗರ ಹೊರ ವಲಯದ ಸಿರಿವಾರ ರಸ್ತೆಯಲ್ಲಿನ ಫಾರಂನಲ್ಲಿ 25 ಘೀರ್ ಆಕಳು ಇದ್ದು, ಈ ಪೈಕಿ ಒಂದು ಖಿಲಾರಿ, ಒಂದು ಸ್ವರ್ಣ ಕಪಿಲ ತಳಿಗಳಿವೆ. ಐದು ಆಕಳುಗಳು ಹಾಲು ನೀಡುತ್ತಿವೆ. ಲೀಟರ್‌ಗೆ .100 ಗಳಂತೆ ನಿತ್ಯ 25ರಿಂದ 30 ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಹಸುಗಳಿಗೆಂದು ಒಂದು ಎಕರೆ ಪ್ರದೇಶದಲ್ಲಿ ಗುಜರಾತ್ ಮೂಲದ ಜಿಂಜ್ವ ಹುಲ್ಲನ್ನು ಬೆಳೆಯಲಾಗುತ್ತಿದೆ. ಇನ್ನುಳಿದ 4 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಬತ್ತ, ಬಿಳಿ ಜೋಳ ಬೆಳೆಯುತ್ತಿದ್ದಾರೆ.
ಗೋವು ಸಾಕಾಣಿಕೆ ಖುಷಿ ನೀಡಿದೆ:
ಈಶಾ ¶ೌಂಡೇಶನ್‌ನ ಸದ್ಗುರುಜೀ, ರಾಜೀವ್ ದೀಕ್ಷಿತ್, ಗೋಪಾಲಬಾಯಿ ಸುತಾರಿಯಾ ಗೋವು ಸಾಕಾಣಿಕೆ-ಸಾವಯವ ಕೃಷಿಗೆ ಪ್ರೇರಣೆ. ದೇಸಿ ಆಕಳುಗಳ ಸಾಕಾಣಿಕೆಯಿಂದ ಉತ್ತಮ ಆದಾಯ ಸಿಗುತ್ತಿದೆ. ಪ್ರತಿ ಲೀಟರ್ ಹಾಲಿಗೆ .100 ಸಿಗುತ್ತದೆ. ಘೀರ್ ಆಕಳು ತುಪ್ಪ ಅತ್ಯಂತ ಬೇಡಿಕೆ ಹೊಂದಿದೆ. ಕೆಜಿಗೆ .3ರಿಂದ .4 ಸಾವಿರದಂತೆ ಮಾರಾಟವಾಗುತ್ತದೆ. ಹೀಗಾಗಿ ರೈತರು ಘೀರ್ ಆಕಳು ಸಾಕಾಣಿಕೆಗೆ ಮುಂದಾಗಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಬಸವರಾಜ ಚಿರತನಾಳ್.
ನನ್ನ ಬತ್ತದ ಗದ್ದೆಗೆ ಗೋಮೂತ್ರ, ಸಗಣಿ, ದಶಪಾಣಿ (ಸಾವಯವ ಕೀಟನಾಶಕ) ಬಳಕೆ ಮಾಡುತ್ತಿರುವೆ. ರೈತರಿಂದ ಹಣ ಡಿಪಾಜಿಟ್ ಇರಿಸಿಕೊಂಡು ಕಡಿಮೆ ದರದಲ್ಲಿ ಗೋಮೂತ್ರ, ಸಗಣೆ, ದಶಪಾಣಿ ನೀಡಲಾಗುವುದು.
ನಮ್ಮಿಂದ ಸಗಣಿ, ಗೋಮೂತ್ರ ಪಡೆದವರು ಮೇವು ನೀಡಬೇಕು. ಬಳಿಕ ಅವರ ಡಿಪಾಜಿಟ್ ಹಣ ಹಿಂತಿರುಗಿಸಲಾಗುವುದು. ಇಂತಹದೊಂದು ಯೋಜನೆ ರೂಪಿಸಿಕೊಂಡಿದ್ದೇವೆ. ಇದರಿಂದ ಸಾವಯವ ಕೃಷಿಕರಿಗೆ ಖರ್ಚು ವೆಚ್ಚ ಸಹ ಕಡಿಮೆಯಾಗಲಿದೆ ಎಂದು ತಿಳಿಸಿದರು. ಮಾಹಿತಿಗೆ ಮೊಬೈಲ್ ಸಂಖ್ಯೆ 7892608923ನ್ನು ಸಂಪರ್ಕಿಸಬಹುದು.
Ballari: ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ?
ವರ್ಕ್ ಫ್ರಂ ಫಾಮ್‌ರ್ ಆಗಲಿ:
ಕೋವಿಡ್ ವೇಳೆ ಅನೇಕರು ವರ್ಕ್ ಫ್ರಂ ಹೋಮ್ ಆಗಿದ್ದರು. ನಾನು ಹೇಳುವುದಿಷ್ಟೇ ನೀವೂ ರೈತರಾಗಿರಲೀ, ಉದ್ಯೋಗಿಯಾಗಿರಲಿ, ಉದ್ಯಮಿಯಾಗಿರಲಿ ನಿಮ್ಮ ಕುಟುಂಬದ ಆರೋಗ್ಯ ರಕ್ಷಣೆಗಾದರೂ ಉತ್ತಮ ಆಹಾರ ತಿನ್ನಿ. ಗುಣಮಟ್ಟದ ಹಾಲು ಉತ್ಪನ್ನಗಳನ್ನು ಬಳಸಿ. ವರ್ಕ್ ಫ್ರಂ ಹೋಮ್ ಜತೆಗೆ ವರ್ಕ್ ಫ್ರಂ ಫಾಮ್‌ರ್ ಆಗಲಿ ಎಂಬುದು ನನ್ನಾಶಯ.
ಬಸವರಾಜ್ ಚಿರತನಾಳ್, ಐಟಿ ಉದ್ಯೋಗಿ,ಬಳ್ಳಾರಿ..