ಶೂ ಹಾಕಿಸಿಕೊಂಡ ಕಾಂಗ್ರೆಸ್ ಸಚಿವ: ವೀಡಿಯೋ ವೈರಲ್
ಮಂತ್ರಿ ಪಟ್ಟ ಸಿಕ್ಕ ಕೆಲ ದಿನಗಳಲ್ಲಿಯೇ ಇ ತುಕರಾಂ ದುರ್ವರ್ತನೆ..!
ನೂತನ ಸಚಿವ ತುಕಾರಾಂ ತಮ್ಮ ಸಹಾಯಕರಿಂದ ಶೂ ತರಿಸಿಕೊಂಡು, ಹಾಕಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಶ್ರೀ ಕನಕ ದುರ್ಗಮ್ಮ ದೇವಿ ದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ನಡೆದಿದೆ. ತುಕಾರಾಂ ಸಹಾಯಕರು ಕಾರಿನ ಹಿಂಭಾಗದ ಡಿಕ್ಕಿಯಲ್ಲಿದ್ದ ಶೋ ತಂದು, ಕಾರಿನ ಮುಂಭಾಗದ ಸೀಟಿನಲ್ಲಿ ಕೂತಿದ್ದ ತುಕರಾಂ ಬಳಿ ತೆರಳಿ ಪಾದದ ಮುಂದೆ ಶೂ ಇರಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಅವರು ಸಚಿವರ ಸಂಬಂಧಿಕರೂ ಎನ್ನಲಾಗಿದ್ದು, ಸಂಬಂಧಿಕರಿಂದಲೇ ಹೀಗೆ ಮಾಡಿಸಿಕೊಂಡಿದ್ದು ಎಷ್ಟು ಸರಿ? ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.