ರಾಯಚೂರು(ನ.27): 5 ವರ್ಷದ ಬಾಲಕಿಯ ಮೇಲೆ 45 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್.ನಂ.2 ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ  ಘಟನೆ ನಡೆದಿದ್ದು ಇಂದು ಪ್ರಕರಣ ಬೆಳಕಿಗೆ ಬಂದಿದೆ. 

ಕ್ಯಾಂಪ್ ನಿವಾಸಿ ಅಮುಲ್ ಮೋಹಲ್ದಾರ್(45) ಎಂಬಾತ ಅತ್ಯಾಚಾರ ಮಾಡಿದ ವ್ಯಕ್ತಿಯಾಗಿದ್ದಾನೆ. ಬಾಲಕಿ ಮೇಲೆ ರೇಪ್ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದನು.

ಅತ್ಯಾಚಾರಕ್ಕೊಳಗಾದ ಮಗು ಜ್ವರದಿಂದ ಬಳಲುತ್ತಿದ್ದರಿಂದ ಸಿಂಧನೂರಿನ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿದಾಗ ಅತ್ಯಾಚಾರ ಪ್ರಕರಣ ಬಯಲಾಗಿದೆ.ಮನೆ ಮುಂದೆ ಆಟವಾಡುತ್ತಿದ್ದ‌ ಮಗುವಿಗೆ ಕಾಮುಕ ವ್ಯಕ್ತಿ ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸಂಸಸ್ತ ಮಗುವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.