Chikkamagaluru: ಡಾಕ್ಟರ್ ಎಡವಟ್ಟಿನಿಂದ ಮಹಿಳೆಯ ಬದುಕು ನರಕ?: ಆಕೆಗೆ ಗಂಡನೇ ಬೆನ್ನುಲುಬು
ಜಗತ್ತಿನಲ್ಲಿ ಆಧುನಿಕತೆ ಸ್ಟ್ರಾಂಗ್ ಆದಷ್ಟು ಸಂಬಂಧಗಳು ವೀಕ್ ಆಗ್ತೀವಿ. ದೊಡ್ಡ-ದೊಡ್ಡ ನಗರಗಳಲ್ಲಿ ಲಿವಿಂಗ್ ಟುಗೆದರ್ ಹೆಸರಲ್ಲಿ ಬೇಕಾದಾಗ ಜೊತೆಗಿದ್ದು ಬೇಡವಾದಾಗ ಬಿಟ್ಟೋಗ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.28): ಜಗತ್ತಿನಲ್ಲಿ ಆಧುನಿಕತೆ ಸ್ಟ್ರಾಂಗ್ ಆದಷ್ಟು ಸಂಬಂಧಗಳು ವೀಕ್ ಆಗ್ತೀವಿ. ದೊಡ್ಡ-ದೊಡ್ಡ ನಗರಗಳಲ್ಲಿ ಲಿವಿಂಗ್ ಟುಗೆದರ್ ಹೆಸರಲ್ಲಿ ಬೇಕಾದಾಗ ಜೊತೆಗಿದ್ದು ಬೇಡವಾದಾಗ ಬಿಟ್ಟೋಗ್ತಿದ್ದಾರೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಲ್ಕೋಡು ಗ್ರಾಮದ ಶಂಕರ್ ಸೌಮ್ಯ ದಂಪತಿಯ ಬದುಕು ಆಗಲ್ಲ. ಆಧುನಿಕತೆಗೆ ಮಾದರಿ. ಯಾಕಂದ್ರೆ, ಈಕೆಯೇ ಸೌಮ್ಯ. ವಯಸ್ಸು 24. 4 ವರ್ಷದ ಹಿಂದೆ ಹೆರಿಗೆ ವೇಳೆ ವೈದ್ಯರು ಕೊಟ್ಟ ಅನಸ್ತೇಶಿಯಾ ಈಕೆ ಬದುಕನ್ನೇ ತಿಂದಿದೆ.
ಆಕೆಗೆ ಗಂಡನೇ ಬೆನ್ನುಲುಬು: ಕಳೆದ ಮೂರೂವರೆ ವರ್ಷಗಳಿಂದ ಸೊಂಟದಿಂದ ಕೆಳಗೆ ಸ್ವಾದೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ಲು. ಈಗ ಧರ್ಮಸ್ಥಳ ಸಂಘದಿಂದ ಕೊಟ್ಟ ವೀಲ್ ಚೇರ್ ಸೇರಿದ್ದಾಳೆ. ಆಸ್ಪತ್ರೆಗೆ ಹೋಗಬೇಕಂದ್ರೆ 8 ಕಿ.ಮೀ. ಹೋಗಬೇಕು. ರಸ್ತೆ ಕೂಡ ಇಲ್ಲ. ಅಟೋ ಬಾಡಿಗೆ 700. ನಿತ್ಯ ಗಂಡ ದುಡಿಯೋದೆ 500. 700 ಎಲ್ಲಿ ತರೋದು. ಗಂಡ ದುಡೀಬೇಕು ಹೆಂಡ್ತಿ, ಮಗು, ತಾಯಿ ನೋಡ್ಕೋಬೇಕು. ಗಂಡ ಕೂಲಿಗೆ ಹೋಗುವ ಮುನ್ನ ಬೆಳಗ್ಗೆ ಬೇಗ ಎದ್ದು ಅಡುಗೆ ಮಾಡಿ, ಹೆಂಡ್ತಿಗೆ ತಿನ್ನಿಸಿ. ಹೊತ್ತುಕೊಂಡೇ ಹೋಗಿ ಆಕೆಯ ನಿತ್ಯ ಕರ್ಮಗಳನ್ನ ಮುಗಿಸಿ ಕೆಲಸಕ್ಕೆ ಹೋಗ್ತಾನೆ.
ಬರ ಬರಲಿ ಎಂದು ರೈತರೇ ಬಯಸ್ತಾರೆ: ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ!
ಸಂಜೆ ಬಂದ ಬಳಿಕ ಮತ್ತದೇ ರೋಟೀನ್ ಲೈಫ್. ಈ ಆದರ್ಶ ಪತಿಯ ಈ ಜೀವನಕ್ಕೆ 4 ವರ್ಷದ ಇತಿಹಾಸವಿದೆ. ಮನೆಯಲ್ಲಿ ವಯಸ್ಸಾ ಅಮ್ಮ ಇದ್ರು ಶಂಕರನೇ ಮನೆ ಹಾಗೂ ಸೌಮ್ಯಾಳ ಬೆನ್ನುಲುಬು. ಇನ್ನು ಈ ಕುಟುಂಬಕ್ಕೆ ಇರೋಕೆ ಸೂರಿಲ್ಲ. ನಾಲ್ಕು ಕಂಬದ ಸುತ್ತ ಟಾರ್ಪಲ್, ಸೀರೆ-ಪಂಜೆಯಲ್ಲಿ ಗೋಡೆ ಕಟ್ಟಿಕೊಂಡಿದ್ದಾರೆ. ಗಾಳಿ ಜೋರಾಗಿ ಬಂದ್ರೆ ಎಲ್ಲಾ ಹಾರಿ ಹೋಗಿರುತ್ತೆ. ಮನೆಯೇ ಇಲ್ಲ. ಕರೆಂಟ್ ಇನ್ನೆಲ್ಲಿ. ಮಳೆಗಾಲದಲ್ಲಿ ಈ ಭಾಗದಲ್ಲಿ ಯತೇಚ್ಛವಾಗಿ ಮಳೆ ಬರುತ್ತೆ. ಆಗ ಇವ್ರ ಬದುಕು ದೇವರಿಗೇ ಪ್ರೀತಿ. ಈ ಮಧ್ಯೆ ಇವ್ರಿಗೆ ರೇಷನ್ ಕಾರ್ಡೂ ಇಲ್ಲ. ಆಧಾರ್ ಕಾರ್ಡೂ ಇಲ್ಲ.
ಸರ್ಕಾರಿ ಸೌಲಭ್ಯದ ನಿರೀಕ್ಷೆಯಲ್ಲಿ ಬಡ ಕುಟುಂಬ: ಸರ್ಕಾರದಿಂದಲೂ ಇವ್ರಿಗೆ ಯಾವುದೇ ಸೌಲಭ್ಯವಿಲ್ಲ. ನಾಲ್ಕು ವರ್ಷದಿಂದ ಹಾಸಿಗೆ ಹಿಡಿದಿದ್ದ ಸೌಮ್ಯಳ ಸ್ಥಿತಿ ನೋಡಲಾಗದೆ ಧರ್ಮಸ್ಥಳ ವಿಪತ್ತು ಘಟಕದವರು ಹಣ ಹಾಕಿ ವೀಲ್ ಚೇರ್ ಕೊಡಿಸಿದ್ದಾರೆ. ಅದರಲ್ಲಿ ಮನೆ ಅಕ್ಕ-ಪಕ್ಕ ಓಡಾಡ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಮಾಡೋದೆ ಕಷ್ಟವಾಗಿದೆ. ಆಸ್ಪತ್ರೆಗೂ ಹೋಗಲಾಗ್ತಿಲ್ಲ. ಮನೆ, ಕರೆಂಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವ್ದೂ ಇಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ನಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನಮಗೂ ಸೌಲಭ್ಯ ನೀಡಬೇಕೆಂದು ಬೇಡಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯರಿಂದ ಮುಸ್ಲಿಂ ತುಷ್ಟೀಕರಣ: ಎಂ.ಪಿ.ರೇಣುಕಾಚಾರ್ಯ ಆರೋಪ
ಒಟ್ಟಾರೆ, ಲಿವಿಂಗ್ ಟುಗೆದರ್ ಹೆಸರಲ್ಲಿ ಬೇಕಾದವರ ಜೊತೆ ಬೇಕಾದಷ್ಟು ದಿನವಿದ್ದು ಬಿಟ್ಟೋಗೋ ಆಧುನಿಕತೆಯ ಜೀವನದಲ್ಲಿ 4 ವರ್ಷದಿಂದ ಹೆಂಡತಿ ಸೇವೆ ಮಾಡ್ತಿರೋ ಗಂಡನ ಕಥೆ ಸಮಾಜಕ್ಕೆ ಮಾದರಿ. ಆದ್ರೆ ಮಾತ್ರ, ಕಾಫಿನಾಡ ಈ ಕಥೆ ನಿಜಕ್ಕೂ ಹಾರಿಬಲ್ ಸ್ಟೋರಿ. ಮನೆ, ಕರೆಂಟ್, ರೇಷನ್, ಆಧಾರ್ ಕಾರ್ಡ್ ಯಾವ್ದೂ ಇಲ್ಲ, ಯಾವ್ದನ್ನೂ ಕೊಟ್ಟಿಲ್ಲ ಅಂದ್ರೆ ಸರ್ಕಾರ, ಅಧಿಕಾರಿಗಳು ಏನ್ ಮಾಡ್ತಿದ್ದಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಕೂಡಲೇ ನಿರ್ಗತಿಕರ ರೀತಿ ಏನೂ ಇಲ್ಲದಂತೆ ಬದುಕ್ತಿರೋ ಈ ಕಡುಬಡತನದ ಕುಟುಂಬಕ್ಕೆ ಸರ್ಕಾರವೂ ಬೆನ್ನುಲುಭಾಗಬೇಕಿದೆ.