Asianet Suvarna News Asianet Suvarna News

Udupi: ಅಪರೂಪದ ದೂರದರ್ಶಕದಲ್ಲಿ ಚಂದ್ರಗ್ರಹಣ ನೋಡುವ ಅವಕಾಶ

ನೇರವಾಗಿ ಆಕಾಶದಲ್ಲಿನ ಗ್ರಹಗಳನ್ನು ನೋಡಲು ಅನುಕೂಲವಾಗುವಂತಹ ಒಂದು ಹೊಸ ಬೈನಾಕ್ಯುಲರ್ ಅನ್ನು ಮಣೆಪಾಲದ ಎಮ್.ಐ.ಟಿ. ಉದ್ಯೋಗಿ ಆರ್ ಮನೋಹರ್ ತಯಾರಿಸಿದ್ದಾರೆ. ಈ ದೂರದರ್ಶಕ 15 ಎಕ್ಸ್ ಜೂಮ್ ಲೆನ್ಸ್ ಹೊಂದಿದೆ.

A chance to See the Lunar Eclipse in a Rare Telescope at Udupi gvd
Author
First Published Nov 3, 2022, 4:41 PM IST

ಉಡುಪಿ (ನ.03): ನೇರವಾಗಿ ಆಕಾಶದಲ್ಲಿನ ಗ್ರಹಗಳನ್ನು ನೋಡಲು ಅನುಕೂಲವಾಗುವಂತಹ ಒಂದು ಹೊಸ ಬೈನಾಕ್ಯುಲರ್ ಅನ್ನು ಮಣೆಪಾಲದ ಎಮ್.ಐ.ಟಿ. ಉದ್ಯೋಗಿ ಆರ್ ಮನೋಹರ್ ತಯಾರಿಸಿದ್ದಾರೆ. ಈ ದೂರದರ್ಶಕ 15 ಎಕ್ಸ್ ಜೂಮ್ ಲೆನ್ಸ್ ಹೊಂದಿದೆ. ಇದನ್ನು 30 ಎಕ್ಸ್ ಜೂಮ್ ಲೆನ್ಸ್ ಆಗಿ ಕೂಡಾ ಬಳಕೆ ಮಾಡಬಹುದು. ಎರಡೂ ಕಣ್ಣುಗಳನ್ನು ಉಪಯೋಗಿಸಿ ಈ ಬೈನಾಕ್ಯುಲರ್‌ನಲ್ಲಿ ಗ್ರಹಗಳ ವೀಕ್ಷಣೆ ಮಾಡಬಹುದು. 

ನೇರ ಪ್ರತಿಬಿಂಬದೊಂದಿಗೆ ಗ್ರಹಗಳು ಕಾಣಸಿಗುತ್ತದೆ. ಒಂದು ವರ್ಷದ ಸತತ ಪ್ರಯತ್ನದ ಮೂಲಕ ಈ ಬೈನಾಕ್ಯುಲರನ್ನು ತಯಾರು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ರೆಡಿಮೇಡ್ ದೂರದರ್ಶಕಗಳಲ್ಲಿ ಜೂಮ್ ಲೆನ್ಸ್ ಅನ್ನು ಪ್ರತ್ಯೇಕವಾಗಿ ಜೋಡಿಸಿ ವೀಕ್ಷಿಸಬಹುದಾದ ಬೈನಾಕ್ಯುಲರ್‌ಗಳು ಇಲ್ಲ. ಈ ನೂತನ ಆವಿಷ್ಕಾರಕ್ಕೆ ಪೇಟೆಂಟ್ ಕೂಡಾ ಲಭಿಸಿದೆ ಈ ರೀತಿ ಆವಿಷ್ಕಾರ ಮಾಡಿ ಪೇಟೆಂಟ್ ಪಡೆದವರಲ್ಲಿ ಆರ್ ಮನೋಹರ ಅವರ ಹೆಸರು ಕೂಡ ಅಂತರ್ಜಾಲದಲ್ಲಿದೆ. 

Udupi: ಪ್ರವಾಸೋದ್ಯಮದ ಬೆಳವಣಿಗೆಗಾಗಿ 'ಉಡುಪಿ ಟೂರಿಸಂ ಕನೆಕ್ಟ್- 2022' ಕಾರ್ಯಾಗಾರ

ನವೆಂಬರ್ 8ರ ಮಂಗಳವಾರದಂದು ನಡೆಯುವ ಚಂದ್ರಗ್ರಹಣದಲ್ಲಿ ಈ ಬೈನಾಕುಲರುಗಳನ್ನು ವೀಕ್ಷಣೆಗೆ ಬಳಸಲಾಗುವುದು. ಸಂಜೆ ಪಾರ್ಶ್ವಬಾಹು ಚಂದ್ರ ಗ್ರಹಣ ಇರುವುದರಿಂದ ಸಂಜೆ  5:00 ರಿಂದ ಆರ್ ಮನೋಹರ್ ಅವರು ಸಿದ್ಧಪಡಿಸಿರುವ,  4 ದೂರದರ್ಶಕದ ಮೂಲಕ ಗ್ರಹಣ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಪಕ್ಕದ ವಿಹಂಗಮ ನೋಟಗಳಾದ ಕಾಪು ಲೈಟ್ ಹೌಸ್, ಮಲ್ಪೆ ಬೀಚ್.. ಪರಂಪಳ್ಳಿ ಚರ್ಚ್ ಗೋಪುರ.. ಉಡುಪಿಯ ಹಳೆಯ ಸಿಂಡಿಕೇಟ್ ಟವರ್.. ಸಂತೆಕಟ್ಟೆಯ ಹಂಚಿನ ಫ್ಯಾಕ್ಟರಿಯ (ಕುಲುಮೆ) ಗೋಪುರ. 

Udupi: ಹೂಳು ತುಂಬಿ ಹಾಳಾಯ್ತು ಸರ್ವ ಋತು ಮೀನುಗಾರಿಕಾ ಬಂದರು

ಅತ್ರಾಡಿ ಮಸೀದಿಯ ಜುಮ್ಮ.. ತೋರಿಸಲಾಗುವುದು. ಈ ಕಾರ್ಯಕ್ರಮವನ್ನು ಪರ್ಕಳದ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ (ಶಿವಂ) ಐದನೇ ಮಹಡಿಯ ಟಾಪ್ ಫ್ಲೋರ್‌ನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಚಂದ್ರಗ್ರಹಣ ಕಾಲ ಸಂಜೆ 6 ಗಂಟೆಗೆ ಆರಂಭಗೊಂಡು ಹತ್ತೊಂಬತ್ತು ನಿಮಿಷ ಮಾತ್ರ ಇರುತ್ತದೆ. ಕಟ್ಟಡ ಮೇಲ್ಭಾಗದ ತನಕ ಲಿಫ್ಟ್‌ನ ವ್ಯವಸ್ಥೆ ಇದೆ‌ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ಈ ಕಾರ್ಯಕ್ರಮ ಖಗೋಳ ಆಸಕ್ತರಿಗೆ ಮತ್ತು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದು ಸರಳೆಬೆಟ್ಟು ತಿಳಿಸಿದ್ದಾರೆ.

Follow Us:
Download App:
  • android
  • ios