ವಿಜಯಪುರ, [ಜ.04]: 5 ವರ್ಷದ ವೃದ್ಧನೊಬ್ಬ 8 ವರ್ಷದ ಅಪ್ರಾಪ್ತ ಪೋರಿಯನ್ನು ಅತ್ಯಾಚಾರ ಮಾಡಿರುವ ಘಟನೆ  ಇಂದು [ಶನಿವಾರ] ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಯಲ್ಲಿ ಬೆಳಕಿಗೆ ಬಂದಿದೆ. 

ಸೇವು ಚೌವ್ಹಾಣ್ [65] ಮುದಿ ಕಾಮುಕ, ಚಾಕೊಲೇಟ್ ಕೊಡುತ್ತೇನೆಂದು 8 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು‌ ಹೋಗಿ ಅತ್ಯಾಚಾರ ಎಸಗಿದ್ದಾನೆ.

ಬಣ್ಣದ ಮಾತಿಗೆ ಮರಳು: ಆಂಟಿಯನ್ನ ಅನುಭವಿಸಿ ಪರಾರಿಯಾದ ಯುವಕ

ಬಾಲಕಿ ಮಾಹಿತಿ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾಮುಕ ಸೇವು ಚೌವ್ಹಾಣ್ ನನ್ನು ದೇವರಹಿಪ್ಪರಗಿ ಪೊಲೀಸರು ಬಂಧಿಸಿ ಫೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿಂತೆ ಎಷ್ಟೇಲ್ಲಾ ಬಿಗಿಯಾದ ಕಾನೂನುಗಳನ್ನು ಜಾರಿಗೆ ತಂದರೂ ಕಾಮುಕರು ಮಾತ್ರ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.