ಚಿತ್ರದುರ್ಗ(ಏ.07): ಸಿಡಿಲು ಬಡಿದು 8 ಮೇಕೆಗಳು ಮೃತ ಪಟ್ಟು ಮೇಕೆಗಾಹಿಯೊಬ್ಬ ಅಸ್ವಸ್ಥ ಗೊಂಡಿರುವ ಘಟನೆ ಮೊಳಕಾಲ್ಮುರು ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಅಸ್ವಸ್ಥ ಗೊಂಡಿರುವವನನ್ನು ಉಚ್ಚಂಗಿದುರ್ಗದ ಬೊಮ್ಮೇಶ ಎಂದು ಹೇಳಲಾಗಿದೆ. ಈತ ಮೇಕೆ ಮೇಯಿಸಲಿಕ್ಕೆ ಹೊಲಕ್ಕೆ ಹೋದಾಗ ಸಂಜೆ ಮಳೆ ಸುರಿದಿದ್ದು, ಇದೇ ವೇಳೆ ಸಿಡಿಲು ಬಡಿದು 8 ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

ಲಾಕ್‌ಡೌನ್‌ ಉಲ್ಲಂಘಿಸಿದರೆ ಈ ಕಾಯ್ದೆ ಅಡಿಯಲ್ಲಿ ಕೇಸು ಹಾಕಬಹುದು!

ಜತೆಗೆ ಬೊಮ್ಮೇಶ ತೀವ್ರ ಅಸ್ವಸ್ಥ ಗೊಂಡಿದ್ದು ಇವನನ್ನು ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ. ತಹಸೀಲ್ದಾರ್‌ ಎಂ.ಬಸವರಾಜ, ಶಿರೇಸ್ಥೇದಾರ್‌ ಉಮೇಶ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್‌ ವಾಲೇಕಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.8 goats died by lightening in chitradurga