ಮಂಗಳೂರು[ಜೂ.16]: ಮನೆ ಕೆಲಸದಲ್ಲಿದ್ದ ಯುವತಿಯ ಮೇಲೆ 5 ವರ್ಷದಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದ ಪ್ರಕರಣ ಮಂಗಳೂರಿನ ಸುಭಾಷ್ ನಗರದಲ್ಲಿ ಬೆಳಕಿಗೆ ಬಂದಿದೆ.

65 ವರ್ಷ ವಯಸ್ಸಿನ ರವಿ ಎಂಬಾತ, ಮನೆಯಲ್ಲಿ ಕೆಲಸಕ್ಕಿದ್ದ ಮೂಡಬಿದ್ರೆಯ ಯುವತಿಯನ್ನು 5 ವರ್ಷಗಳಿಂದ ನಿರಂತರ ಅತ್ಯಾಚಾರಗೈದಿದ್ದಾನೆ. ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗೆಲ್ಲಾ, ಮನೆಯವರನ್ನು ಕೊಲ್ಲುವುದಾಗಿ ಹೆದರಿಸಿ ಒತ್ತಾಯಪೂರ್ವಕವಾಗಿ ರೇಪ್ ಮಾಡಿದ್ದಾನೆ. 

ಅತ್ಯಾಚಾರಕ್ಕೆ ರವಿ ಪತ್ನಿ ಬೆಂಬಲ ನೀಡುತ್ತಿದ್ದಳೆಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಅಲ್ಲದೇ ಈವರೆಗೆ ಮೂರು ಬಾರೀ ಅಬಾರ್ಷನ್ ಕೂಡಾ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ. 

ಸದ್ಯು ಯುವತಿಯ ದೂರಿನ ಮೇರೆಗೆ ಅತ್ಯಾಚಾರ ಅರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.