ಮಂಡ್ಯ(ಫೆ.17): ಮಂಗಳೂರಿನ ಬಂಟ್ವಾಳದಲ್ಲಿ ಅಪಘಾದಲ್ಲಿ 54 ಮಂದಿ ಗಾಯಗೊಂಡ ಬೆನ್ನಲ್ಲೇ ಇದೀಗ ಮಂಡ್ಯದಲ್ಲಿ ಟಿಪ್ಪರ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 40 ಮಂದಿ ಗಾಯಗೊಂಡಿದ್ದಾರೆ.

KSRTC ಬಸ್ ಗೆ ಟಿಪ್ಪರ್ ಡಿಕ್ಕಿಯಾಗಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಮೈಸೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶ್ರೀರಂಗಪಟ್ಟಣ ತಾಲೂಕಿನ ಟ್ಟಹಳ್ಳಿಯಲ್ಲಿ ಘಟನೆ ನಡೆದಿದೆ.

3 ಪಲ್ಟಿ ಹೊಡೆದ ಬಸ್‌: 50 ಜನಕ್ಕೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಪ್ರಯಾಣಿಕರನ್ನ ಇಳಿಸುವ ವೇಳೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿಯಾಗಿದೆ. 20ಕ್ಕೂ ಹೆಚ್ಚು ಮಂದಿಗೆ ಮೂಳೆ ಮುರಿತವಾಗಿದೆ. ಬಸ್ಸಿನಲ್ಲಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

'ಹಾಡುತ್ತಾ, ಕುಣಿಯುತ್ತಾ ಇದ್ದವರು ಕ್ಷಣದಲ್ಲೇ ಹೆಣವಾದ್ರು..'!

ಗಾಯಾಳುಗಳಿಗೆ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.