Asianet Suvarna News Asianet Suvarna News

ನಾಲ್ಕು ಜನ ಕೊರೋನಾ ಸೋಂಕಿತರು ಗುಣಮುಖ, ಹೊಸ ಪ್ರಕರಣವಿಲ್ಲ

ಮಂಗಳೂರಿನಲ್ಲಿ ಸೋಮವಾರ ಕೊರೋನಾ ಸೋಂಕಿತ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಹೊಸ ಸೋಂಕಿತ ಪ್ರಕರಣ ವರದಿಯಾಗಿಲ್ಲ.

 

4 COVID19 positive people cured no fresh cases in Mangalore
Author
Bangalore, First Published Apr 7, 2020, 7:36 AM IST

ಮಂಗಳೂರು(ಏ.07): ಮಂಗಳೂರಿನಲ್ಲಿ ಸೋಮವಾರ ಕೊರೋನಾ ಸೋಂಕಿತ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಹೊಸ ಸೋಂಕಿತ ಪ್ರಕರಣ ವರದಿಯಾಗಿಲ್ಲ.

ಪರೀಕ್ಷೆಗೆ ಕಳುಹಿಸಿದ ಶಂಕಿತರ ಗಂಟಲು ದ್ರವದ ಎಲ್ಲ 21 ಪ್ರಕರಣಗಳ ವರದಿ ನೆಗೆಟಿವ್‌ ಬಂದಿದೆ. 10 ಪ್ರಕರಣಗಳ ಸ್ಯಾಂಪಲ್‌ನ್ನು ಸೋಮವಾರ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೆ 10 ಪ್ರಕರಣಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಕಾರ್ಕಳದ ವ್ಯಕ್ತಿ ಮುಂಬೈಯಲ್ಲಿ ಕೊರೋನಕ್ಕೆ ಬಲಿ

ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರುವವರ ಸಂಖ್ಯೆ 10ಕ್ಕೆ ಇಳಿಕೆಯಾಗಿದೆ. ಇದುವರೆಗೆ ಒಟ್ಟು 341 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 331 ಸ್ಯಾಂಪಲ್‌ ವರದಿ ಬಂದಿದ್ದು, 319 ನೆಗೆಟಿವ್‌ ಹಾಗೂ 12 ಪಾಸಿಟಿವ್‌ ಬಂದಿತ್ತು. ಇದರಲ್ಲಿ ನಾಲ್ವರು ಸೋಮವಾರ ಡಿಸ್ಚಾಜ್‌ರ್‍ ಆಗಿದ್ದಾರೆ.

ಭಾರತದಲ್ಲಿ ಒಂದೇ ದಿನ 700 ಜನಕ್ಕೆ ವೈರಸ್‌, ಮುಂದಿನ ವಾರ ಡೇಂಜರ್!

ಬಿಗು ಲಾಕ್‌ಡೌನ್‌ ಮುಂದುವರಿಕೆ

ಲಾಕ್‌ಡೌನ್‌ ಏ.7ರಂದು ಕೂಡ ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಮುಂದುವರಿಯಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ವಿನಾ ಕಾರಣ ರಸ್ತೆಗೆ ಬಂದರೆ, ಅಂತವರ ವಾಹನ ಮುಟ್ಟುಗೋಲು ಹಾಕುವ ಕಾರ್ಯಾಚರಣೆಯನ್ನು ಪೊಲೀಸ್‌ ಇಲಾಖೆ ನಡೆಸಲಿದೆ.

Follow Us:
Download App:
  • android
  • ios