Asianet Suvarna News Asianet Suvarna News

ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ 36,85,930 ಸಂಗ್ರಹ

ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ 36,85,930 ಭಕ್ತರ ಕಾಣಿಕೆಯಿಂದ ಸಂಗ್ರಹ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನ| 2019 ಸೆಪ್ಟೆಂಬರ್‌ 30ರಿಂದ 17, ಜನವರಿ 2020 ರವರೆಗೆ ಈ ಹಣ ಸಂಗ್ರಹ|

3685930 Rs in Mailaralingeshwara Temple in Ballari
Author
Bengaluru, First Published Jan 20, 2020, 8:33 AM IST

ಹೂವಿನಹಡಗಲಿ(ಜ.20): ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ 36,85,930 ಭಕ್ತರ ಕಾಣಿಕೆಯಿಂದ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕಾಧಿಕಾರಿ ಯು.ಎಚ್‌. ಪ್ರಕಾಶ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆ​ಯ​ವ​ರೆಗೆ ವಿವಿಧ ಕಡೆಗಳಲ್ಲಿ ಇಡಲಾಗಿದ್ದ 8 ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌, ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅ​ಧಿಕಾರಿ ಯು.ಎಚ್‌. ಪ್ರಕಾಶರಾವ್‌, ಅ​ಧೀಕ್ಷಕ ಮಲ್ಲಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಪಿ.ಎ. ಮನ್ನಂಗಿ, ಬಸವರಾಜಪ್ಪ ಒಡೆಯರ್‌, ಮುಖಂಡರಾದ ಜಗದೀಶಗೌಡ, ಮಾಲತೇಶ, ಶಂಕರಗೌಡ ಸೇರಿದಂತೆ ಇತರರಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2019 ಸೆಪ್ಟೆಂಬರ್‌ 30ರಿಂದ 17, ಜನವರಿ 2020 ರವರೆಗೆ ಈ ಹಣ ಸಂಗ್ರಹವಾಗಿದೆ ಎಂದು ಕಾರ್ಯನಿರ್ವಾಹಕ ಅ​ಧಿಕಾರಿ ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios