ಮಂಡ್ಯ: ಮನೆಯ ವಠಾರದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣುಮಗುವಿನ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರ ವೆಸಗಿರುವ ಘಟನೆ ಜಿಲ್ಲೆಯ ಚಿಂದರದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. 

ಸುತ್ತಮುತ್ತ ಯಾರೂ ಇಲ್ಲದ್ದನ್ನು ಗಮನಿಸಿದ ಬಾಲಕ ಮಗುವನ್ನು ತನ್ನ ಮನೆಯೊಳಗೆ ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ.

ಅಳುತ್ತಾ ಮನೆಗೆ ಹಿಂದುರುಗಿದ ಬಾಲಕಿಯ ಬಟ್ಟೆ ಹರಿದಿದ್ದನ್ನು ಗಮನಿಸಿದ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಬಾಲಕ ಪೋಲಿಸರ ವಶದಲ್ಲಿದ್ದಾನೆ. 

ಮಹಿಳಾ ಇಲಾಖೆ ಅಧಿಕಾರಿಗಳು ಬಾಲಕಿ ಹಾಗೂ ಪೋಷಕರ ಹೆತ್ತವರಿಂದ ಘಟನೆ ವಿವರ ಪಡೆದಿದ್ದಾರೆ.