Asianet Suvarna News Asianet Suvarna News

ಮಾಜಿ ಅರಣ್ಯ ಸಚಿವ ಸಿ.ಚನ್ನಿಗಪ್ಪ ವಿಧಿವಶ

ಮಾಜಿ ಅರಣ್ಯ ಸಚಿವ ಸಿ.ಚನ್ನಿಗಪ್ಪ ಶುಕ್ರವಾರ ಬೆಳಗ್ಗೆ 8:20 ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ನೆಲಮಂಗಲ ಬಳಿಯ ಭೈರನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

 

3 time mla former minister C Chennigapppa passed away
Author
Bangalore, First Published Feb 21, 2020, 12:57 PM IST

ತುಮಕೂರು(ಫೆ.21): ಮಾಜಿ ಅರಣ್ಯ ಸಚಿವ ಸಿ.ಚನ್ನಿಗಪ್ಪ ಶುಕ್ರವಾರ ಬೆಳಗ್ಗೆ 8:20 ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ನೆಲಮಂಗಲ ಬಳಿಯ ಭೈರನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಚನ್ನಿಗಪ್ಪ ಕರ್ನಾಟಕ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಚನ್ನಿಗಪ್ಪ ಇಂದು ಬೆಳಗ್ಗೆ 8:20 ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಅಮೂಲ್ಯಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ, ಗ್ರಾಮಸ್ಥರಿಂದ ಆಕ್ರೋಶ

ಮಾಜಿ ಸಚಿವ ಚೆನ್ನಿಗಪ್ಪ ವಿಧಿವಶ ವಿಚಾರವಾಗಿ ರಾಮನಗರದಲ್ಲಿ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ದೇವೇಗೌಡರ ಅತ್ಯಂತ ಆತ್ಮೀಯರಾಗಿ, ನನಗೆ ಹಿರಿಯರಾಗಿ, ಹಿತೈಷಿಗಳಾಗಿದ್ರು. ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರು.

ಅವರ ನಿಧನ ವೈಯಕ್ತಿಕವಾಗಿ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ಕುಟುಂಬದ ಜೊತೆ ಆತ್ಮೀಯ ಬಾಂಧವ್ಯ ಹೊಂದಿದ್ರು. ನಮ್ಮೆಲ್ಲರ ಬಗ್ಗೆ ಅವರಲ್ಲಿದ್ದ ಪ್ರೀತಿ ವಿಶ್ವಾಸ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ್ದು. ನಮ್ಮ ಒಡನಾಟದಲ್ಲಿದ್ದ ಕುಟುಂಬದ ಓರ್ವ ವ್ಯಕ್ತಿ ಚನ್ನಿಂಗಪ್ಪ. ಸುದೀರ್ಘ ಅನಾರೋಗ್ಯದಿಂದ ಅವರು ಹೊರಬರಲೆಂದು ಕುಟುಂಬದವರು ಸಾಕಷ್ಟು ಶ್ರಮ ವಹಿಸಿದ್ದು ನನಗೆ ಗೊತ್ತಿದೆ. ಆ ಕುಟುಂಬಕ್ಕೆ ಆಗಿರುವ ನೋವು, ನಷ್ಟವನ್ನ ಆ ಭಗವಂತ ಸರಿಪಡಿಸುವ  ಶಕ್ತಿ ನೀಡಲಿ. ಚನ್ನಿಗಪ್ಪರ ಆತ್ಮಕ್ಕೆ ಭಗವಂತ ಸಂಪೂರ್ಣವಾದ ಶಾಂತಿ ಕೊಡಲಿ ಎಂದು ಹೇಳಿದ್ದಾರೆ.

ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಶಿವರಾತ್ರಿ ದಿನ ಮರಣ ಹೊಂದಿರುವಂತಹದ್ದು ಅವರು ದೇವರ ಭಕ್ತರು, ಶಿವ, ಆಂಜನೇಯನ ಭಕ್ತರು. ಶಿವನೇ ಶಿವರಾತ್ರಿ ಹಬ್ಬದ ದಿನ ತನ್ನ ಬಳಿ ಕರೆಸಿಕೊಂಡಿದ್ದಾನೆನೋ ಅನ್ನೋದು ನನ್ನ ಭಾವನೆ. ನನ್ನ ಜೀವನದಲ್ಲಿ ಅತ್ಯಂತ ದುಃಖದ ದಿನ. ಅಂತ್ಯಸಂಸ್ಕಾರದಲ್ಲಿ ನಾನು ಭಾಗವಹಿಸುತ್ತೇನೆ ಎಂದಿದ್ದಾರೆ.

Follow Us:
Download App:
  • android
  • ios