Asianet Suvarna News Asianet Suvarna News

ರೈತರಿಗೆ ಬಂಪರ್ : 160 ಕೋಟಿ ರು ಸಾಲ ಮನ್ನಾ

ಸಾವಿರಾರು ರೈತರ ಕೋಟ್ಯಂತರ ರು ಸಾಲ ಮನ್ನಾ ಮಾಡಲಾಗಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು. ಇದರಿಂದ ಅನೇಕ ರೈತರಿಗೆ ಅನುಕೂಲವಾಗಿದೆ ಎಂದರು. 

1800 Farmers Loan Waiver in Hassan
Author
Bengaluru, First Published Feb 27, 2020, 10:36 AM IST

ಹಾಸನ (ಫೆ.27): ತಾಲೂಕಿನ 36 ಸಾವಿರ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದ 160 ಕೋಟಿ ರು. ಸಾಲ ಮನ್ನವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಬಾಗೂರು ಹೋಬಳಿ ಬಿದರೆ, ಬಳಘಟ್ಟ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉಳಿದ1800 ರೈತರ 10 ಕೋಟಿ ಸಾಲ ಮನ್ನಾ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.  

60 ಕೋಟಿ ತೆಂಗು ಪುನಶ್ಚೇತನ  ಪರಿಹಾರ ಹಣವನ್ನು ಪಕ್ಷಾತೀತವಾಗಿ ಎಲ್ಲ ಅರ್ಜಿ ಸಲ್ಲಿಸಿದವರಿಗೂ ಸಿಕ್ಕಿದೆ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ 200 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಯಾಗಿದೆ ಉಳಿದ ರಸ್ತೆ ಅಭಿವೃದ್ಧಿಗೆ 75 ಕೋಟಿ ರು. ಬಿಡುಗಡೆ ಆಗಬೇಕಿದೆ ಎಂದರು. 

ಸುದೀರ್ಘ ರಜೆಯಲ್ಲಿ ರಾಜ್ಯ ಕಾಂಗ್ರೆಸ್‌, ಚಟುವಟಿಕೆಗಳೂ ಬಂದ್!...

32 ಕೋಟಿ ವೆಚ್ಚದ ಕಲ್ಲೆ ಸೋಮನಹಳ್ಳಿ ಏತ ನೀರಾವರಿ ಯೋಜನೆಯ 22 ಕ್ಯುಸೆಕ್ಸ್ ಕುಡಿವ ನೀರು ಹರಿಸಲು ರೈತರು ಕಾಮಗಾರಿಗೆ ತಮ್ಮ ಭೂಮಿ ಬಿಟ್ಟುಕೊಡಬೇಕು ಎಂದರು. ಬಿದರೆ, ಕೆಂಬಾಳು, ಶಿವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಪಡೆದ 9 ಕೋಟಿ ರು. ಸಾಲ ಮನ್ನವಾಗಿದೆ ಎಂದರು. 

ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವಣ್ಣ, ಮಂಜುನಾಥ್, ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಾಗರಾಜ್, ಗ್ರಾಪಂ ಅಧ್ಯಕ್ಷ ಮಂಜು ನಾಥ್, ಮೇಲ್ವಿ ಚಾರಕ ಅಭಿಲಾಷ್, ಕಾರ್ಯ ನಿರ್ವಹಣಾಧಿ ಕಾರಿ ಉಮಾ, ಶರತ್, ನಿರ್ದೇಶಕರಾದ ಸ್ವಾಮಿ, ಕಿಟ್ಟಿ, ರಮೇಶ್, ಈರೇಗೌಡ, ಪಾರ್ವತಮ್ಮ, ರಾಚಯ್ಯ ಇದ್ದರು.

Follow Us:
Download App:
  • android
  • ios