World AIDS Day : ಚಿಕ್ಕಬಳ್ಳಾಪುರದಲ್ಲಿ 12 ವರ್ಷದಲ್ಲಿ 1,282 ಮಂದಿ ಎಚ್‌ಐವಿಗೆ ಬಲಿ

  • ಆಂಧ್ರದ ಗಡಿಯಲ್ಲಿರುವ ಜಿಲ್ಲೆಯಲ್ಲಿ ಮಹಾಮಾರಿ ಏಡ್ಸ್‌ ರೋಗಿಗೋ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ
  • ಪೂರ್ಣ ಪ್ರಮಾಣದಲ್ಲಿ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ಹರಸಾಹಸ
1282 People Dies From HIV in Chikkaballapur last 12 years snr

 ಚಿಕ್ಕಬಳ್ಳಾಪುರ (ಡಿ.01):  ಆಂಧ್ರದ (Andhra Pradesh ) ಗಡಿಯಲ್ಲಿರುವ ಜಿಲ್ಲೆಯಲ್ಲಿ ಮಹಾಮಾರಿ ಏಡ್ಸ್‌ (Aids) ರೋಗಿಗೋ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ ಕಂಡು ಬರುತ್ತಿದ್ದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ (Health Department) ಹರಸಾಹಸ ಪಡುತ್ತಿದೆ.  ಹೌದು, ಪ್ರಸಕ್ತ ಸಾಲಿನಲ್ಲಿ ಕೂಡ ಎಚ್‌ಐವಿ (HIV) ಪರೀಕ್ಷೆಗೆ (Test) ಒಳಪಟ್ಟವರ ಪೈಕಿ 6 ಮಂದಿ ಗರ್ಭಿಣಿಯರು ಸೇರಿ ಒಟ್ಟು 80 ಮಂದಿಗೆ ಹೆಚ್‌ಐವಿ ಪಾಸಿಟಿವ್‌ (HIV Positive) ಬಂದಿದ್ದು ಕಳೆದ 2009ರಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆಯೆ ಬರೋಬ್ಬರಿ 1282 ಮಂದಿ. ಆ ಪೈಕಿ 796 ಪುರುಷರು, 468 ಮಹಿಳೆಯರು (Woman ) ಆದರೆ 18 ಮಂದಿ ಮಕ್ಕಳು (Children) ಸೇರಿದ್ದಾರೆ.

29,289 ಮಂದಿಗೆ ಪರೀಕ್ಷೆ:  ಜಿಲ್ಲೆಯಲ್ಲಿ ಕಳೆದ 2009 ರಿಂದ ಹೆಚ್‌ಐವಿ ಸೋಂಕಿತರ ಪತ್ತೆ ಘಟಕ (Testing Unit) ಕಾರ್ಯಾರಂಭ ಮಾಡಿದ್ದು ಇಲ್ಲಿಯವರೆಗೂ ಪ್ರತಿ ವರ್ಷ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಆದರೆ ಅದನ್ನು ಶೂನ್ಯಕ್ಕೆ ತರುವ ಪ್ರಯತ್ನಕ್ಕೆ ಫಲ ದೊರೆತಿಲ್ಲ. ಜಿಲ್ಲೆಯಲ್ಲಿ ಹೆಚ್‌ಐವಿ ಸೋಂಕಿತರು ಪತ್ತೆ ಆಗುತ್ತಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ.

2021ನೇ ಸಾಲಿನಲ್ಲಿ ಒಟ್ಟು 29,189 ಮಂದಿಗೆ ಹೆಚ್‌ಐವಿ ಪರೀಕ್ಷೆ (HIV Test) ನಡೆಸಲಾಗಿದ್ದು ಆ ಪೈಕಿ 74 ಮಂದಿಗೆ, 10,725 ಪರೀಕ್ಷಿಸಿದಾಗ ಕೇವಲ 6 ಮಂದಿ ಗರ್ಭಿಣಿಯರಿಗೆ (Pregnant) ಪಾಸಿಟಿವ್‌ ಸೇರಿ ಒಟ್ಟು 80 ಮಂದಿಗೆ ಹೆಚ್‌ಐವಿ ಪಾಟಿಸಿವಿ ಕಂಡು ಬಂದಿದೆ. ಒಟ್ಟು ಪರೀಕ್ಷೆಯಲ್ಲಿ ಶೇ.025 ರಷ್ಟು ಪಾಟಿಸಿವಿಟಿ ಬಂದಿದೆ. 2020 ರಲ್ಲಿ ಶೇ.0.38 ರಷ್ಟಿದ್ದರೆ 2019 ರಲ್ಲಿ ಶೇ.0.39 ರಷ್ಟಿತ್ತು. 2018 ರಲ್ಲಿ ಶೇ.0.51 ರಷ್ಟುಇತ್ತು.

ಜಿಲ್ಲೆಯಲ್ಲಿ 5,098 ಎಚ್‌ಐವಿ ಪೀಡಿತರು :  ಜಿಲ್ಲೆಯಲ್ಲಿ ಒಟ್ಟು 2,585 ಪುರುಷರು, 2,375 ಮಂದಿ ಮಹಿಳೆಯರು, 71 ಬಾಲಕರು, 59 ಬಾಲಕಿಯರು, , 8 ಇತರೇ ಸೇರಿ ಒಟ್ಟು 5,098 ಮಂದಿ ಹೆಚ್‌ಐವಿ ಸೋಂಕಿತರು ಇದ್ದು ಆ ಪೈಕಿ 1,195 ಪುರುಷರು, 1,275 ಮಹಿಳೆಯರು, 42 ಬಾಲಕರು,, 33 ಬಾಲಕಿಯರು ಹಾಗೂ ಇತರೇ 3 ಸೇರಿ ಒಟ್ಟು 2,548 ಮಂದಿ ಮಾತ್ರ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಒಟ್ಟಾರೆ ಹೆಚ್‌ಐವಿ ಸೋಂಕಿತರ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಕೇಂದ್ರ ಇದ್ದರೆ, ಎರಡನೇ ಸ್ಥಾನದಲ್ಲಿ ವಾಣಿಜ್ಯ ನಗರಿ ಚಿಂತಾಮಣಿ (Chintamani), ಮೂರನೇ ಸ್ಥಾನದಲ್ಲಿ ಗೌರಿ ಬಿದನೂರು ತಾಲೂಕು ಇದೆ. ಉಳಿದಂತೆ ಶಿಡ್ಲ ಘಟ್ಟ, ಗುಡಿಬಂಡೆ, ಬಾಗೇಪಲ್ಲಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ಇವೆ.

ಜಿಲ್ಲೆಯಲ್ಲಿ ಎಆರ್‌ಟಿ ಕೇಂದ್ರ (ART Centre) ಆರಂಭಗೊಂಡ ಬಳಿಕ ಪ್ರತಿ ವರ್ಷ ಶೀಘ್ರದಲ್ಲಿಯೆ ಎಚ್‌ಐವಿ (HIV) ಸೋಂಕಿತರನ್ನು ಪತ್ತೆ ಮಾಡಿ ಅವರಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ರೋಗ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ರೂಪಿಸಿ  ಕೊಂಡು ಬರುತ್ತಿದೆ. ಪ್ರತಿ ವರ್ಷ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ.

ಡಾಯಲ್ಲಾ ರಮೇಶ್‌ ಬಾಬು, ಹೆಚ್‌ಐವಿ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ

  •   ಚಿಕ್ಕಬಳ್ಳಾಪುರದಲ್ಲಿ  1,282 ಮಂದಿ ಎಚ್‌ಐವಿಗೆ ಬಲಿ
  •  ಪ್ರಸ್ತಕ ಸಾಲಿನಲ್ಲಿ 6 ಮಂದಿ ಗರ್ಭಿಣಿಯರು ಸೇರಿ ಒಟ್ಟು 80 ಮಂದಿಗೆ ಎಚ್‌ಐವಿ ಸೋಂಕು
  • ಪೂರ್ಣ ಪ್ರಮಾಣದಲ್ಲಿ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ಹರಸಾಹಸ 
Latest Videos
Follow Us:
Download App:
  • android
  • ios