ಸಿಎಂ ಜತೆ ಸೆಲ್ಫೀ ತೆಗೆದುಕೊಳ್ಳಲು ಪರದಾಡಿದ ಮಹಿಳೆ

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮಹಿಳಾ ಕಾರ್ಯಕರ್ತೆಯೊಬ್ಬರು ಪರದಾಡಿದರು.  ಒಂದು ಕೈಯಲ್ಲಿ ವ್ಯಾನಿಟಿ ಬ್ಯಾಗ್, ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು, ಸೆಲ್ಫೀ ತೆಗೆದುಕೊಳ್ಳಲಾಗದೇ ಪರದಾಡಿದರು. ನಂತರ ಎಐಸಿಸಿ ವಕ್ತಾರ ವಿಷ್ಣುನಾದನ್ ಮಹಿಳಾ ನೆರವಿಗೆ ಆಗಮಿಸಿದರು. ಸೆಲ್ಫೀ ತೆಗೆದುಕೊಂಡ ನಂತರ ಮಹಿಳೆ ವೇದಿಕೆಯಿಂದ ಕೆಳಗಿಳಿದರು.

Comments 0
Add Comment