ಹೆಂಡತಿ ಬಗ್ಗೆ ಮಾತನಾಡಿದ್ರೆ ಪ್ರತಾಪ್ ಸಿಂಹ ಸುಮ್ನಿರ್ತಾರಾ?: ಪ್ರಕಾಶ್ ರೈ

Will Pratap simha keep mum if I speak about his wife asks Prakash Rai
Highlights

ಬಿಜೆಪಿ ಹಾಗೂ ಪ್ರಧಾನಿ ಮೋದಿ #JustAsking ಅಭಿಯಾನದಡಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ನಟ, ಚಿಂತಕ ಪ್ರಕಾಶ್ ರೈ 'ನಾನು ಹಿಂದೂ ವಿರೋಧಿಯಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ #JustAsking ಅಭಿಯಾನದಡಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ನಟ, ಚಿಂತಕ ಪ್ರಕಾಶ್ ರೈ 'ನಾನು ಹಿಂದೂ ವಿರೋಧಿಯಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.

'ಯಾವ ಧರ್ಮದ ವಿರೋಧಿಯೂ ಅಲ್ಲ.  ಧರ್ಮದ ಬೆಂಕಿ ಹಚ್ಚಬಾರದು. ದೀಪ ಉರಿಸಬೇಕು.  ಧರ್ಮದ ಹೆಸರಲ್ಲಿ ಸರ್ಕಾರ ಕಟ್ಟಬೇಡಿ.  ಸೆಕ್ಯೂಲರಿಸಂ ವಿದೇಶಿ ಸಂಸ್ಕೃತಿ.  ಭಾರತದಲ್ಲಿ ಹಲವು ಧರ್ಮಗಳಿವೆ.  ಭಾರತಕ್ಕೆ ಸೆಕ್ಯೂಲರಿಸಂ ಬೇಡ. ಜನರು ಸಹಿಷ್ಣುತೆಯಿಂದ ಇರಬೇಕು ,' ಎಂದ ಹೇಳಿದ್ದಾರೆ.

'ಬಿಜೆಪಿಯವರು ಹಿಂದೂ ಧರ್ಮದ ಗುತ್ತಿಗೆ ಪಡ್ಕೊಂಡಿದ್ದೀರಾ? ಸರಕಾರ ರಚಿಸಿದ ಮೇಲೆ ಧರ್ಮ, ಜಾತಿ ಏಕೆ?  ಬೆಂಕಿ ಹಚ್ಚುವ ಮಾತುಗಳೇಕೆ?  ನನ್ನನ್ನು ಪಾಕಿಸ್ತಾನಕ್ಕೆ ಯಾಕೆ, ಬೇರೆ ದೇಶಕ್ಕೆ ಕಳುಹಿಸಿ,' ಎಂದರು.

'ಪೆಟ್ರೋಲ್ ಇವರಪ್ಪನ ಬಾವಿಯಿಂದ ಬರುತ್ತಾ?  ಪೆಟ್ರೋಲ್ ಅರಬ್ ದೇಶಗಳಿಂದ ಬರುತ್ತದೆ.  ಜನಪ್ರತಿನಿಧಿಗಳನ್ನು ಮಾತನಾಡಲು ಬಿಡಿ.  ಪ್ರಧಾನಿಯವರೇ ಯಾಕೆ ನಿಮ್ಮವರ ಬಾಯಿ ಮುಚ್ಚಿಸುತ್ತೀರಿ?', ಎಂದು ಪ್ರಶ್ನಿಸಿದರು.

'ಸಾಮಾಜಿಕ ಜಾಲತಾಣ ಚಾರಿತ್ರ್ಯ ಹರಣ ತಾಣವಾಗಿದೆ. ಅನಂತಕುಮಾರ್ ಹೆಗಡೆ ನಾಲಗೆ ತುದಿಯಲ್ಲಿ ಕೋಮುವಾದ ಇದೆ.  ಪ್ರತಾಪ್ ಸಿಂಹನ ಹೆಂಡತಿ ಬಗ್ಗೆ ಮಾತನಾಡಿದ್ರೆ, ಸುಮ್ನಿರ್ತಾರಾ? ನನಗೆ ಯಾರ ಮಗ್ಗಲಲ್ಲಿ ಮಲಗಿ ಬಂದವರು ಅಂತ ಸಿಂಹ ಪ್ರಶ್ನೆ ಮಾಡಿದ್ದರು. ಪ್ರತಾಪ್ ಸಿಂಹನಿಗೆ  ಸಂಸ್ಕೃತಿಯೇ ಗೊತ್ತಿಲ್ಲ,' ಎಂದರು ರೈ. 

loader