’ಅವರಪ್ಪನಾಣೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲ್ಲ, ಜೆಡಿಎಸ್25 ಸೀಟು ಗೆದ್ರೆ ಅದೇ ಹೆಚ್ಚು’

ಮುಧೋಳದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಯಡಿಯೂರಪ್ಪ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ ಹಾಗೂ ಜೆಡಿಎಸ್ 25  ಕ್ಷೇತ್ರಗಳನ್ನು ಗೆದ್ದರೆ ಅದೇ ಹೆಚ್ಚು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ರೈತರ ಸಾಲಮನ್ನಾ ಮಾಡಿ ಎಂದು ಗೊಗೆರದರೂ ಕೂಡಾ ಮೋದಿ ಜಪ್ಪಯ್ಯ ಎನ್ನಲಿಲ್ಲ. ನೀವಾದರೂ ಹೇಳಿ ಎಂದು ಬಿಜೆಪಿಯವರಿಗೆ ಮನವಿ ಮಾಡಿಕೊಂಡರೂ ಯಾವನೇ ಒಬ್ಬ ನಾಯಕ ತುಟಿ ಪಿಟಿಕ್ ಎನ್ನಲಿಲ್ಲ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Comments 0
Add Comment