ಮಹಾದೇವಪ್ಪನ ಜೊತೆ ಟೂ ಬಿಟ್ಟ ಸಿದ್ದು

Siddaramaiah and Mahadevappa Friends turn enemies
Highlights

ಕಷ್ಟದ ಸನ್ನೀವೇಷದಲ್ಲಿ ಕೈಹಿಡಿದು ಒಟ್ಟಾಗಿದ್ದ ಇವರಿಬ್ಬರು ಇಂದು ಒಬ್ಬರನ್ನೊಬ್ಬರು ಮುಖ ನೋಡಲು ಇಷ್ಟಪಡುತ್ತಿಲ್ಲ. ಇಬ್ಬರ ಸ್ನೇಹದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಇವರಿಬ್ಬರ ಮುನಿಸಿಗೆ ಕಾರಣ ಚುನಾವಣಾ ಪಂಡ್ ವಿಷಯ. ಮಹದೇವಪ್ಪ ಅವರಿಗೆ ಸಿದ್ದರಾಮಯ್ಯ 20 ಕ್ಷೇತ್ರ ಗಳಿಗೆ ಚುನಾವಣೆ ಗೆ ಫಂಡ್ ಮಾಡಲು ಸೂಚಿಸಿದ್ದರು.

ಮೈಸೂರು[ಮೇ.27]: ಸಾಂಸ್ಕೃತಿಕ ನಗರಿಯ ರಾಜಕಾರಣದಲ್ಲಿ ಗಳಸ್ಯ ಕಂಠಸ್ಯರಾಗಿರುವ ಮಹಾದೇವಪ್ಪ ಹಾಗೂ ಸಿದ್ದರಾಮಯ್ಯ ಅವರ ಸ್ನೇಹ ಹಳಸಿರುವುದು 
ಹಲವರಿಗೆ ನಿದ್ದೆಗೆಡಿಸಿರುವುದಂತೂ ಸತ್ಯ.
ಕಷ್ಟದ ಸನ್ನೀವೇಷದಲ್ಲಿ ಕೈಹಿಡಿದು ಒಟ್ಟಾಗಿದ್ದ ಇವರಿಬ್ಬರು ಇಂದು ಒಬ್ಬರನ್ನೊಬ್ಬರು ಮುಖ ನೋಡಲು ಇಷ್ಟಪಡುತ್ತಿಲ್ಲ. ಇಬ್ಬರ ಸ್ನೇಹದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಇವರಿಬ್ಬರ ಮುನಿಸಿಗೆ ಕಾರಣ ಚುನಾವಣಾ ಪಂಡ್ ವಿಷಯ. ಮಹದೇವಪ್ಪ ಅವರಿಗೆ ಸಿದ್ದರಾಮಯ್ಯ 20 ಕ್ಷೇತ್ರ ಗಳಿಗೆ ಚುನಾವಣೆ ಗೆ ಫಂಡ್ ಮಾಡಲು ಸೂಚಿಸಿದ್ದರು.
ಆದರೆ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಕೈಕೊಟ್ಟರಂತೆ  ಮಹಾದೇವಪ್ಪ. ಅಭ್ಯರ್ಥಿಗಳು ಫೋನ್ ರೀಸಿವ್ ಮಾಡದೇ ಇಬ್ಬಗೆ ನೀತಿ ಅನುಸರಿಸಿದರಂತೆ ಮಹಾದೇವಪ್ಪ.  ಈ ಬಗ್ಗೆ ಸಿದ್ದರಾಮಯ್ಯ ಬಳಿ ದೂರು ಹೇಳಿರುವ ಅಭ್ಯರ್ಥಿಗಳು ನಮ್ಮ ಸೋಲಿಗೆ ಮಹಾದೇವಪ್ಪ ಕಾರಣ ಎಂದು ಅವರ ವಿರುದ್ಧ ಬೆರಳು ತೋರಿಸಿದ್ದಾರೆ. 
ಎಂಎಲ್ಸಿಗೆ ಸಹಕರಿಸದ ಸಿದ್ದು
ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ತನನ್ನು ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಮಾತನಾಡಿಸಲು ಒಂದು ವಾರದ ಹಿಂದೆ ಪ್ರಯತ್ನ ಮಾಡಿ ಅವರ ಪಿಎಗೆ ಕರೆ ಮಾಡಿ ಸಾಹೇಬರಿಗೆ ಕೊಡು ಫೋನ್ ಅಂದಿದ್ದರು. ಸಿದ್ದರಾಮಯ್ಯನವರು ಇದನ್ನು ಕೇಳಿಸಿಕೊಂಡು ಬ್ಯುಸಿ ಇದಾರೆ ಸಾಹೇಬರು ಅಂತ ಮಹಾದೇವಪ್ಪ ಸಾಹೇಬರಿಗೆ ತಿಳಿಸು ಅಂತ ವ್ಯಂಗ್ಯವಾಗಿ ಹೇಳಿದ್ದಾರೆ ಎನ್ನಲಾಗಿದೆ.

loader