ವಿಜಯೇಂದ್ರ ಪ್ರಹಸನದ ಹಿಂದಿನ ರಹಸ್ಯವೇನು?

Secret of Vijayendra Ticket Issue
Highlights

ಒಂದು ತಿಂಗಳ ಹಿಂದೆ ವಿಜಯೇಂದ್ರ ಮೈಸೂರು ಸುತ್ತಮುತ್ತ ಓಡಾಡಲು ಆರಂಭಿಸಿದಾಗ ಪಿಯೂಷ್  ಗೋಯಲ್ ಯಡಿಯೂರಪ್ಪನವರಿಗೆ, ‘ಬಿಜೆಪಿಯಲ್ಲಿ ತಂದೆ ಮತ್ತು ಪುತ್ರನಿಗೆ ಟಿಕೆಟ್ ಕೊಡುವುದು ಕಷ್ಟ. ಮೋದಿ ಮತ್ತು ಶಾ ಇಬ್ಬರಿಗೂ ಇದು ಇಷ್ಟವಿಲ್ಲ’ ಎಂದು ಸೂಚ್ಯವಾಗಿ ಹೇಳಿದ್ದರಂತೆ. ಅಷ್ಟೇ ಅಲ್ಲ ದೆಹಲಿಗೆ ಪಟ್ಟಿ ಅಂತಿಮಗೊಳಿಸಲು ಯಡಿಯೂರಪ್ಪ  ಬಂದಾಗಲೂ ಸ್ವತಃ ಅಮಿತ್ ಶಾ, ‘ಯಡಿಯೂರಪ್ಪನವರೇ, ಯಾವುದೇ ರಾಜ್ಯದಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್ ಕೊಟ್ಟಿಲ್ಲ. ಮೋದಿ ಸಾಹೇಬರು ಒಪ್ಪೋದಿಲ್ಲ. ನೀವು ಬೇರೆ ಹೆಸರು ಸೂಚಿಸುವುದು ಒಳಿತು ಎಂದು ಹೇಳಿದ್ದರಂತೆ.

ಬೆಂಗಳೂರು (ಏ. 24): ಒಂದು ತಿಂಗಳ ಹಿಂದೆ ವಿಜಯೇಂದ್ರ ಮೈಸೂರು ಸುತ್ತಮುತ್ತ ಓಡಾಡಲು ಆರಂಭಿಸಿದಾಗ ಪಿಯೂಷ್  ಗೋಯಲ್ ಯಡಿಯೂರಪ್ಪನವರಿಗೆ, ‘ಬಿಜೆಪಿಯಲ್ಲಿ ತಂದೆ ಮತ್ತು ಪುತ್ರನಿಗೆ ಟಿಕೆಟ್ ಕೊಡುವುದು ಕಷ್ಟ. ಮೋದಿ ಮತ್ತು ಶಾ ಇಬ್ಬರಿಗೂ ಇದು ಇಷ್ಟವಿಲ್ಲ’ ಎಂದು ಸೂಚ್ಯವಾಗಿ ಹೇಳಿದ್ದರಂತೆ. ಅಷ್ಟೇ ಅಲ್ಲ ದೆಹಲಿಗೆ ಪಟ್ಟಿ ಅಂತಿಮಗೊಳಿಸಲು ಯಡಿಯೂರಪ್ಪ  ಬಂದಾಗಲೂ ಸ್ವತಃ ಅಮಿತ್ ಶಾ, ‘ಯಡಿಯೂರಪ್ಪನವರೇ, ಯಾವುದೇ ರಾಜ್ಯದಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್ ಕೊಟ್ಟಿಲ್ಲ. ಮೋದಿ ಸಾಹೇಬರು ಒಪ್ಪೋದಿಲ್ಲ. ನೀವು ಬೇರೆ ಹೆಸರು  ಸೂಚಿಸುವುದು ಒಳಿತು ಎಂದು ಹೇಳಿದ್ದರಂತೆ.

ಇದೇ ಅಂಶ ಏಪ್ರಿಲ್ 10 ರಂದು, ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಆದರೆ ವರುಣಾ ಯುದ್ಧ ಹೇಗೆ ಸಾಗುತ್ತದೆ ಎಂದು ನೋಡಿ ಮುಂದೆ  ತೀರ್ಮಾನಿಸೋಣ ಎಂದು ಯಡಿಯೂರಪ್ಪನವರೂ ದಿನ ದೂಡುತ್ತಲೇ ಬಂದಿದ್ದರು. ನಂತರ, ನಾಗಠಾಣದಿಂದ ಗೋವಿಂದ ಕಾರಜೋಳ ಪುತ್ರನಿಗೆ ಹಾಗೂ ಅರಸೀಕೆರೆಯಿಂದ ಸೋಮಣ್ಣ  ಪುತ್ರನಿಗೆ ಟಿಕೆಟ್ ನೀಡಿದಾಗ ಬಹುಶಃ ವಿಜಯೇಂದ್ರ ಹಾದಿಯೂ ಸುಗಮವಾಯಿತು ಎಂದು ಯಡಿಯೂರಪ್ಪ ಸೇರಿದಂತೆ ಎಲ್ಲರೂ ಅಂದುಕೊಂಡಿದ್ದರು. ಅದೇ ನಂಬಿಕೆಯಲ್ಲಿ  ವಿಜಯೇಂದ್ರ ಕೂಡ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದರು.

ಟಿಕೆಟ್ ನಿರಾಕರಣೆಯಾಗಬಹುದು ಎಂಬ ಕಲ್ಪನೆ ಸ್ವತಃ  ಯಡಿಯೂರಪ್ಪನವರಿಗೆ ಇರಲೇ ಇಲ್ಲ. ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿಯವರು ಹಿಂದೆ ಮಾಡಿದಂತೆ ಕೊನೆ ಹಂತದಲ್ಲಿ, ವರುಣಾದಲ್ಲಿನ ಹವಾ ನೋಡಿ ಶಾ ಅವರೂ ಪುತ್ರನಿಗೆ ಟಿಕೆಟ್ ಗಟ್ಟಿಗೊಳಿಸಬಹುದು ಎಂದೇ ಯಡಿಯೂರಪ್ಪನವರೂ ನಂಬಿದ್ದರು. ಆದರೆ, ರವಿವಾರ ರಾತ್ರಿ ಅಮಿತ್ ಶಾ ಹಲವಾರು ಕಾರಣಗಳಿಗಾಗಿ ವಿಜಯೇಂದ್ರಗೆ  ಕೊಡೋಕೆ ಸಾಧ್ಯವಾಗುತ್ತಿಲ್ಲ ಎಂದು ಯಡಿಯೂರಪ್ಪನವರಿಗೆ ಸಂದೇಶ ನೀಡಿದರಂತೆ.  

-ಪ್ರಶಾಂತ್ ನಾತು 

ರಾಜಕೀಯದ ಬಗ್ಗೆ ಕುತೂಹಲಕಾರಿ ಮಾಹಿತಿಗೆ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

loader