ಸಂಘಪರಿವಾರದಿಂದ ಮತೀಯ ಭಾವನೆ ಕೆರಳಿಸಿ ಮತ ಪಡೆಯುವ ಹುನ್ನಾರ : ರಮಾನಾಥ್ ರೈ

’ಇದು ಹಿಂದು ಮನೆ,  ಬಡ ಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶವಿಲ್ಲ’ ಎಂಬ ಪೋಸ್ಟರ್’ಗಳು ಬಂಟ್ವಾಳ ಪರಿಸರದಲ್ಲಿ ಕಾಣಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಚಿವ ರಮನಾಥ್ ರೈ, ಈ ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡವಿದೆ. ಜನರನ್ನು ಮತೀಯ ಆಧಾರದ ಮೇಲೆ ಕೆರಳಿಸಿ ಓಟು ಪಡೆಯುವ ಹುನ್ನಾರವಿದೆ, ಎಂದು ಹೇಳಿದ್ದಾರೆ. 

Comments 0
Add Comment