ರಿಪಬ್ಲಿಕ್ ಟಿವಿ ಸರ್ವೆಯಲ್ಲಿ ರಾಜ್ಯ ಅತಂತ್ರ: ಬಿಜೆಪಿ ಹೆಚ್ಚು ಸ್ಥಾನ

ಬೆಂಗಳೂರು(ಮೇ.೦3): ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಏಷ್ಯಾನೆಟ್ ಸಮೂಹದ ರಿಪಬ್ಲಿಕ್ ಟಿವಿ ಸಮೀಕ್ಷೆ ನಡೆಸಿದ್ದು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ - 102ರಿಂದ 108 , ಕಾಂಗ್ರೆಸ್ 72 ರಿಂದ 74, ಜೆಡಿಎಸ್ - 42 ರಿಂದ 44 ಇತರರು - 2ರಿಂದ 4 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. 
ಶೇಕಡವಾರು ಮತದಲ್ಲಿ ಬಿಜೆಪಿ 40, ಕಾಂಗ್ರೆಸ್ 38, ಜೆಡಿಎಸ್ 20 ಹಾಗೂ ಇತರೆ 2ರಷ್ಟು  ಹಂಚಿಕೆಯಾಗಲಿದೆ. 2008ರ ಫಲಿತಾಂಶ ಮತ್ತೆ ಮರುಕಳಿಸಲಿದೆ ಎಂದು ಸಮೀಕ್ಷೆ ವರದಿಗಳು ತಿಳಿಸಿವೆ. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.  

Comments 0
Add Comment