ಹುಬ್ಬಳ್ಳಿಯಲ್ಲಿ ವಿಮಾನ ಕುಸಿಯುತ್ತಿದ್ದಾಗ ನನ್ನ ಜೀವನ ಮಗೀತು ಅನ್ನಿಸಿತ್ತು

ನವದೆಹಲಿ(ಏ.30):ದೆಹಲಿಯ ಜನಾಕ್ರೋಶ ರಾಲಿಯಲ್ಲಿ ಹುಬ್ಬಳ್ಳಿಯಲ್ಲಿ ವಿಮಾನದಿಂದ ಆದ ಭಯದ ಅನುಭವವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾಗ 8 ಸಾವಿರ ಅಡಿಗಳಷ್ಟು ವಿಮಾನ ಕುಸಿಯಿತು. ಕ್ಷಣದಲ್ಲೇ ನಾನು ಮಾನಸ ಸರೋವರ ಯಾತ್ರೆ ಕೈಗೊಳ್ಳ ಬೇಕು ಎಂದುಕೊಂಡೆ. ಕರ್ನಾಟಕ ಚುನಾವಣೆ ಬಳಿಕ 10 -15 ದಿನಗಳ ಕಾಲ ಮಾನಸ ಸರೋವರ ಯಾತ್ರೆ ಕೈಗೊಳ್ಳುವೆ. ಇದಕ್ಕೆ ಹೋಗಲು ನಿಮ್ಮ ಅನುಮತಿ ಬೇಡುವೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

Comments 0
Add Comment