ಸಿಎಂ ಬಾದಾಮಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ಒಪ್ಪಿದ್ದು ಇದೇ ಕಾರಣಕ್ಕಾ?

First Published 24, Apr 2018, 2:19 PM IST
Rahul Gandhi Green Signal to CM Siddaramaiah
Highlights

ಟಿಕೆಟ್ ಪಡೆದಿದ್ದ ಸಿದ್ದರಾಮಯ್ಯ ಮೈಸೂರಿಗೆ ಹೋಗಿ ಕುಳಿತು ಫೋನಾಯಿಸಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ಗೆ. ಬಿಜೆಪಿ, ಜೆಡಿಎಸ್ ಒಳ ಒಪ್ಪಂದದ ಪರಿಣಾಮವಾಗಿ, ಚಾಮುಂಡೇಶ್ವರಿಯನ್ನೇ ಗೆಲ್ಲಲು ನಾನು ಪ್ರಯತ್ನಿಸುತ್ತಾ ಕುಳಿತರೆ ಪೂರ್ತಿ ರಾಜ್ಯ ಸುತ್ತುವುದಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದರಂತೆ.

ನವದೆಹಲಿ (ಏ.24):  ಟಿಕೆಟ್ ಪಡೆದಿದ್ದ ಸಿದ್ದರಾಮಯ್ಯ ಮೈಸೂರಿಗೆ ಹೋಗಿ ಕುಳಿತು ಫೋನಾಯಿಸಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ಗೆ. ಬಿಜೆಪಿ, ಜೆಡಿಎಸ್ ಒಳ ಒಪ್ಪಂದದ ಪರಿಣಾಮವಾಗಿ, ಚಾಮುಂಡೇಶ್ವರಿಯನ್ನೇ ಗೆಲ್ಲಲು ನಾನು ಪ್ರಯತ್ನಿಸುತ್ತಾ ಕುಳಿತರೆ ಪೂರ್ತಿ ರಾಜ್ಯ ಸುತ್ತುವುದಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದರಂತೆ.

ತಕ್ಷಣ ರಾಹುಲ್ ಮನೆಗೆ ದೌಡಾಯಿಸಿದ ವೇಣುಗೋಪಾಲ್ ಸಿದ್ದು ಹೇಳಿದ ವಿಚಾರವನ್ನು ಗಮನಕ್ಕೆ ತಂದಾಗ ರಾಹುಲ್, ‘ಅವರಿಗೆ ಏನು ಬೇಕೋ ಅದನ್ನೇ ಮಾಡಿ, ಉಳಿದವರನ್ನು ಸಮಾಧಾನ ಮಾಡೋಣ. ಬಾದಾಮಿಯಿಂದ ಕೂಡ ಸ್ಪರ್ಧಿಸಲಿ’ ಎಂದು ಹಸಿರು ನಿಶಾನೆ ಕೊಟ್ಟರಂತೆ.  

-ಪ್ರಶಾಂತ್ ನಾತು 

ರಾಜಕೀಯದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

loader