ಹಣ ಹಂಚುತ್ತಿದ್ದ ಆರೋಪ : ಹ್ಯಾರಿಸ್ ಸಂಬಂಧಿಗೆ ಗೂಸಾ

ಬೆಂಗಳೂರು(ಮೇ.12): ಮತದಾನ ಸಂದರ್ಭದ ವೇಳೆ ಹಣ ನೀಡಿ ಕಾಂಗ್ರೆಸ್'ಗೆ ಮತ ಚಲಾಯಿಸುವಂತೆ ಒತ್ತಾಯಿಸುತ್ತಿದ್ದ ಶಾಸಕ ಹ್ಯಾರಿಸ್ ಸಂಬಂಧಿಗೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. 
ಇದಕ್ಕೂ ಮೊದಲು ಹಲ್ಲೆಗೆ ಒಳಗಾದ ವ್ಯಕ್ತಿ ಹಣ ನೀಡುವುದನ್ನು ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಪೋರೇಟರ್ ಶಿವಕುಮಾರ್ ಮೇಲೆ ಥಳಿಸಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ರಾಜ್ಯದಾದ್ಯಂತ 222 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಶೇಕಡ 36.8ರಷ್ಟು ಮತದಾನವಾಗಿದೆ.  ತುಮಕೂರು, ಹಾಸನದ ಹೊಳೆನರಸಿಪುರ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಘರ್ಷಣೆ ಸಂಭವಿಸಿವೆ.  

Comments 0
Add Comment