ನಾವು ಕೋಮುವಾದಿಗಳಲ್ಲ, ಅಲ್ಪಸಂಖ್ಯಾತರ ಪಕ್ಷವೂ ಅಲ್ಲ: ಎಂಇಪಿಯ ವಂದನಾ ಜೈನ್

ನಾವು ಕೋಮುವಾದಿಗಳಲ್ಲ, ಅಲ್ಪಸಂಖ್ಯಾತರ ಪಕ್ಷವೂ ಅಲ್ಲ. ಜಾತಿಗಳನ್ನು ಮೀರಿ ಜನತೆಯ ಸೇವೆ, ವಿಶೇಷವಾಗಿ ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಗುರಿ. ಗೆಲ್ತಿವೋ ಸೋಲ್ತಿವೋ ಅದರ ಬಗ್ಗೆ ಚಿಂತೆಯಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿಯೂ ಕೂಡಾ ಸ್ಪರ್ಧಿಸುವುದು ಖಂಡಿತಾ.

ನಾವು ನಂಬಿರುವ ಸಿದ್ಧಾಂತದ ಆಧಾರದಲ್ಲಿ  ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಯಾರ ಪರವಾಗಿಯೂ ಅಲ್ಲ, ಯಾರ ವೋಟಗಳನ್ನು ಒಡೆಯುದಕ್ಕೂ ಅಲ್ಲ. ನಮಗೆ ಕೇವಲ ಮುಸ್ಲಿಮರು ಅಲ್ಲ, ಹಿಂದೂಗಳು ವೋಟು ನೀಡುತ್ತಾರೆ. ಪಕ್ಷದ ಅಭ್ಯರ್ಥಿಗಳ ಪೈಕಿ 2-3 ಶೇ. ಮಾತ್ರ ಮುಸ್ಲಿಮರಿದ್ದಾರೆ.

ನಾವು ಅಧಿಕಾರಕ್ಕೆ ಬಂದ್ರೆ ಆರೋಗ್ಯಸೇವೆಗಳು ಎಲ್ಲರಿಗೂ ಉಚಿತವಾಗಿ ಕೊಡುತ್ತೇವೆ. ಪಕ್ಷದ ಅಧ್ಯಕ್ಷೆ ಮಹಿಳೆಯಾಗಿದ್ದಾರೆ. ಡಾ. ನೌಹಿರಾ ಶೇಖ್ ಪಕ್ಷದಿಂದ ಶೇ.30 ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಸುತ್ತಿದ್ದಾರೆ.

Comments 0
Add Comment