ಬಾದಾಮಿ ನಾಮಪತ್ರ ಸಲ್ಲಿಕೆ ಮುಂದೂಡಿದ ಸಿಎಂ; ದೇವಿ ಮೊರೆ ಹೋದ್ರಾ ಸಿದ್ದರಾಮಯ್ಯ?

ಚಾಮುಂಡೇಶ್ವರಿಯಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವುದನ್ನು ಮುಂದೂಡಿದ್ದಾರೆ. ಮಂಗಳವಾರ ಬಾದಾಮಿಯ ಬನಶಂಕರಿಯ ‘ದೇವಿ ವಾರ’ವಾಗಿರುವುದರಿಂದ ಅದೇ ದಿನ ದರ್ಶನ ಪಡೆದು ನಾಮಪತ್ರ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಸ್ಥಳೀಯ ಮುಖಂಡರು ಬನಶಂಕರಿ ದೇವಾಲಯದ ಅರ್ಚಕರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆಂದು ಹೇಳಲಾಗಿದೆ. ಮೈಸೂರಿನಲ್ಲಿ  ಚಾಮುಂಡೇಶ್ವರಿಯ ದರ್ಶನ ಮಾಡಿ, ಪೂಜೆ ಸಲ್ಲಿಸಿದ ನಂತರವೇ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದರು.

Comments 0
Add Comment