ಕುತೂಹಲ ಕೆರಳಿಸಿದೆ ಸಿಎಂ ಸಿದ್ದರಾಮಯ್ಯರ ಮಿಷನ್ ‘ಅಂಬರೀಷ ಸಂಧಾನ’

ಪಕ್ಷದಿಂದ ಮುನಿಸಿಕೊಂಡಿರುವ ಮಂಡ್ಯ ಅಭ್ಯರ್ಥಿ ಅಂಬರೀಷ್’ರೊಂದಿಗೆ ಸಿಎಂ ಸಿದ್ದರಾಮಯ್ಯ ನೇರ ಸಂಧಾನಕ್ಕೆ ಮುಂದಾಗಿದ್ದಾರೆ. ಭಾನುವಾರ ಮಧ್ಯಾಹ್ನ ಅಂಬರೀಷ್ ಹಾಗೂ ಅವರ ಬೆಂಬಲಿಗರನ್ನು ಸಿದ್ದರಾಮಯ್ಯ ಮಾತುಕತೆ ನಡೆಸಲು ಮೈಸೂರಿಗೆ ಆಹ್ವಾನಿಸಿದ್ದಾರೆ. ಮಂಡ್ಯದಿಂದ ಟಿಕೆಟ್ ಸಿಕ್ಕಿದ ಬಳಿಕವೂ ಕಣಕ್ಕಿಳಿಯುವ ಬಗ್ಗೆ ಅಂಬರೀಷ್ ಮೀನಮೇಷ ಎಣಿಸುತ್ತಿದ್ದಾರೆ. ತನ್ನ ಆಪ್ತ ಅಮರಾವತಿ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಅಂಬರೀಷ್ ಆಸಕ್ತರಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಾಗಿರಬಹುದು ಎಂದು ಕುತೂಹಲ ಕೆರಳಿಸಿದೆ.

Comments 0
Add Comment