ಬೆಂಗಳೂರು (ಏ.24): ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಬಿಜೆಪಿ ಇನ್ನೂ ಹೆಣಗಾಡುತ್ತಿದೆ. ಪಕ್ಷ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ಜತೆಗೆ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿರುವ ಬಾದಾಮಿ ಹಾಗೂ ವರುಣಾ ಕ್ಷೇತ್ರಗಳಿಗಿನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಕೆಲವು ಕ್ಷೇತ್ರಗಳಲ್ಲಿ ಗೆಲವನ್ನು ಮಾನದಂಡವೆಂದು ಪರಿಗಣಿಸದ ಕೇಸರಿ ಪಡೆ, ತೀವ್ರ ಪೈಪೋಟಿ ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತಿದೆ. 

ಮೇಲುಕೋಟೆ ಮತ್ತು ಮಂಡ್ಯ ಅಭ್ಯರ್ಥಿಗಳನ್ನು ಇದೀಗ ಬದಲಾಯಿಸಿದ್ದು, ಎಸ್.ಎಂ.ಕೃಷ್ಣ ಅವರು ಆಪೇಕ್ಷಿಸಿದವರಿಗೆ ಟಿಕೆಟ್ ನೀಡಲಾಗಿದೆ.

ಕುತೂಹಲ ಬಿಟ್ಟು ಕೊಡದ ಬಾದಾಮಿ, ವರುಣಾ:

ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಸಿದ್ಧವಾಗಿದ್ದ ವರುಣಾ ಹಾಗೂ ಖುದ್ದು ಸಿಎಂ ಸಿದ್ದರಾಮಯ್ಯ  ಅವರೇ ಸ್ಪರ್ಧಿಸುತ್ತಿರುವ ಬಾದಾಮಿಗಿನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗದಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

ಪರಿಷ್ಕೃತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೀಗಿದೆ...
ಅರಸೀಕೆರೆ: ಮರಿಸ್ವಾಮಿ
ಸಕಲೇಶಪುರ:  ಸೋಮಶೇಖರ್
ಮಧುಗಿರಿ:  ರಮೇಶ್ ರೆಡ್ಡಿ
ಶಿರಾ: ಎಸ್.ಆರ್.ಗೌಡ
ಶಿಡ್ಲಘಟ್ಟ: ಎಚ್.ಸುರೇಶ್
ಶ್ರೀನಿವಾಸಪುರ: ಡಾ.ವೇಣುಗೋಪಾಲ್
ಮಂಡ್ಯ: ಚಂದಗಾಲ ಶಿವಣ್ಣ
ಮೇಲುಕೋಟೆ: ಶಿವಲಿಂಗೇ ಗೌಡರು