ಯಾರ ಮಾತಿಗೂ ಕ್ಯಾರೇ ಎನ್ನದ ಅಂಬರೀಷ್; ಯಾರಿಗೂ ಮಾತಿಗೆ ಸಿಗದ ರೆಬೆಲ್ ಸ್ಟಾರ್!

ಟಿಕೆಟ್ ಸಿಕ್ಕಿದ ಬಳಿಕವೂ ಕಾಂಗ್ರೆಸ್’ನೊಂದಿಗೆ ಮುನಿಸಿಕೊಂಡಿರುವ ರೆಬೆಲ್ ಸ್ಟಾರ್ ಅಂಬರೀಷ್ ಇಂದು ಮೈಸೂರಿನಲ್ಲಿದ್ದರೂ ಯಾರಿಗೂ ಸಿಗದೆ ಕನ್ಣುಮುಚ್ಚಾಲೆಯಾಟಯಾಡಿದ್ದಾರೆ. ಮಂಡ್ಯ ಟಿಕೆಟ್ ಬಗ್ಗೆ ಮುಂದಿನ ನಡೆ ಏನಾಗಿರಬೇಕು ಎಂದು ಚರ್ಚಿಸಲು ಅಂಬರೀಷ್ ಹಾಗೂ ಸಿಎಂ ಸಿದ್ಧರಾಮಯ್ಯ ಭೇಟಿಯಾಗಬೇಕಿತ್ತು. ಆದರೆ ಮೈಸೂರಿನಲ್ಲಿದ್ದರೂ ಅಂಬರೀಷ್ ಯಾರ ಕೈಗೆ ಸಿಗದಿರುವುದು ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ. ಅಂಬರೀಷ್ ಆಪ್ತ ಅಮರಾವತಿ ಚಂದ್ರಶೇಖರ್ ಹಾಗೂ ಬೆಂಬಲಿಗರು ಭೇಟಿಯಾಗಲು ಪ್ರಯತ್ನ ಪಟ್ಟರೂ  ಸಾಧ್ಯವಾಗಿಲ್ಲ.

Comments 0
Add Comment