ರೆಸಾರ್ಟ್ ತಲುಪಿದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬೌನ್ಸರ್ ಗಳ ಭದ್ರತೆ

ಬೆಂಗಳೂರು (ಮೇ. 18): ರೆಸಾರ್ಟ್ ರಾಜಕಾರಣ ರಂಗೇರಿದೆ. ಕಾಂಗ್ರೆಸ್ - ಜೆಡಿಎಸ್ ಶಾಸಕರು ರೆಸಾರ್ಟ್ ತಲುಪಿದ್ದಾರೆ.  

ಶಾಸಕರಿಗೆ ಬೌನ್ಸರ್​​​​ಗಳ ಭದ್ರತೆ ಒದಗಿಸಲಾಗಿದೆ.  ವಿಶೇಷವಾಗಿ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.  ಇಬ್ಬರು ಶಾಸಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಬೌನ್ಸರ್​​ಗಳಿಗೆ ಡಿಕೆಶಿ ಸೂಚನೆ ನೀಡಿದ್ದಾರೆ. 

ನಾಗೇಂದ್ರ & ಗಣೇಶ್ ನಮ್ಮನ್ನು ಬಿಡಿ ಎಂದು ಡಿ.ಕೆ ಶಿವಕುಮಾರ್​​​ಗೆ ಒತ್ತಾಯಿಸಿದ್ದಾರೆ. ಆದರೆ  ಇಬ್ಬರು ತಪ್ಪಿಸಿಕೊಂಡ್ರೆ ಕಾಂಗ್ರೆಸ್ ಕೈಗೆ ಸಿಗಲ್ಲ ಎಂದು ಕಟ್ಟೆಚ್ಚರ ವಹಿಸಲು ಡಿಕೆಶಿ ಸೂಚನೆ ನೀಡಿದ್ದಾರೆ. ಬಿಎಸ್ ವೈ ಎಷ್ಟು ದಿನಗಳೊಳಲಾಗಿ ಬಹುಮತ ಸಾಬೀತುಪಡಿಸಬೇಕೆಂದು 10.30 ಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರ ಬೀಳಲಿದ್ದು, ಬಿಜೆಪಿ ಬಹುಮತ ಸಾಬೀತು ಪಡಿಸುವ ಒತ್ತಡದಲ್ಲಿದೆ. 

Comments 0
Add Comment