12 ಕೋಟಿ ಒಡೆಯನ ಬಳಿ ಸ್ವಂತಕ್ಕೊಂದು ಕಾರಿಲ್ಲ!

Jagadish Shettar Does not have a Car
Highlights

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಬಳಿ ಸ್ವಂತ ಕಾರಿಲ್ಲ!

ಅಚ್ಚರಿಯಾದರೂ ಇದು ಸತ್ಯ. ಜಗದೀಶ ಶೆಟ್ಟರ್‌ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿವರವನ್ನು ತಿಳಿಸಿದ್ದಾರೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಶೆಟ್ಟರ್‌ ಬಳಿ ಒಟ್ಟು .12.26 ಕೋಟಿ ರು. ಸಂಪತ್ತಿದೆ. ಈ ಪೈಕಿ ಚರಾಸ್ತಿಯು .2.54 ಕೋಟಿ ಮೌಲ್ಯದ್ದಾಗಿದೆ. ಶೆಟ್ಟರ್‌ ಹೆಸರಲ್ಲಿ .2.01 ಕೋಟಿ ಚರಾಸ್ತಿ ಇದ್ದರೆ, ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿ .53.02 ಲಕ್ಷ ಇದೆ.

ಹುಬ್ಬಳ್ಳಿ (ಏ. 24):  ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಬಳಿ ಸ್ವಂತ ಕಾರಿಲ್ಲ!

ಅಚ್ಚರಿಯಾದರೂ ಇದು ಸತ್ಯ. ಜಗದೀಶ ಶೆಟ್ಟರ್‌ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿವರವನ್ನು ತಿಳಿಸಿದ್ದಾರೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಶೆಟ್ಟರ್‌ ಬಳಿ ಒಟ್ಟು .12.26 ಕೋಟಿ ರು. ಸಂಪತ್ತಿದೆ. ಈ ಪೈಕಿ ಚರಾಸ್ತಿಯು .2.54 ಕೋಟಿ ಮೌಲ್ಯದ್ದಾಗಿದೆ. ಶೆಟ್ಟರ್‌ ಹೆಸರಲ್ಲಿ .2.01 ಕೋಟಿ ಚರಾಸ್ತಿ ಇದ್ದರೆ, ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿ .53.02 ಲಕ್ಷ ಇದೆ.

2013ರಲ್ಲಿ ಜಗದೀಶ ಶೆಟ್ಟರ್‌ ಅವರ ಬಳಿ .4.44 ಕೋಟಿ ಆಸ್ತಿ ಇತ್ತು. ಅದೀಗ .12.26 ಕೋಟಿಗೆ ಏರಿದ್ದು, ಒಟ್ಟಾರೆ ಐದು ವರ್ಷದಲ್ಲಿ .7.72 ಕೋಟಿ ಹೆಚ್ಚಳ ಕಂಡಿದೆ.

ಒಟ್ಟು .9.72 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಆ ಪೈಕಿ .9.51 ಕೋಟಿ ಸ್ಥಿರಾಸ್ತಿ ಶೆಟ್ಟರ್‌ ಹೆಸರಲ್ಲಿದ್ದರೆ, ಇನ್ನುಳಿದ ಸುಮಾರು .21 ಲಕ್ಷ ಮೌಲ್ಯದ ಸ್ಥಿರಾಸ್ತಿ ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿದೆ. ಆದರೆ ಮೋಟರು ವಾಹನ, ಏರ್‌ ಕ್ರಾಫ್ಟ್‌, ದೋಣಿಗಳು, ಹಡಗುಗಳು ಸೇರಿದಂತೆ ಯಾವುದೇ ಬಗೆಯ ವಾಹನಗಳು ಶೆಟ್ಟರ್‌ ಆಗಲಿ ಅವರ ಪತ್ನಿಯಾಗಲಿ ಹೊಂದಿಲ್ಲ.

ಪತ್ನಿಗೆ ಸಾಲ ಕೊಟ್ಟಶೆಟ್ಟರ್‌:

ಶೆಟ್ಟರ್‌ ವಿವಿಧ ಬ್ಯಾಂಕ್‌ ಹಾಗೂ ಸ್ನೇಹಿತರ ಕಡೆ ಕೈಗಡ ಮಾಡಿರುವ ಸಾಲದ ಮೊತ್ತ .2.01 ಕೋಟಿ ತುಂಬಬೇಕಿದೆ. ಇನ್ನು ಶೆಟ್ಟರ್‌ ಅವರು ತಮ್ಮ ಪತ್ನಿ ಶಿಲ್ಪಾ ಶೆಟ್ಟರ್‌ಗೆ ಕೊಟ್ಟಿರುವ ಸಾಲ .13.64 ಲಕ್ಷ ಸೇರಿದಂತೆ ಒಟ್ಟು .1.51 ಕೋಟಿ ಸಾಲ ಮರಳಿ ಬರಬೇಕಿದೆ. ಇದೆಲ್ಲವೂ ಅವರ ಕುಟುಂಬಸ್ಥರಿಗೆ ನೀಡಿರುವ ಸಾಲವಾಗಿದೆ. ಪುತ್ರ ಪ್ರಶಾಂತ ಶೆಟ್ಟರ್‌ಗೆ .52.85 ಲಕ್ಷ, ಇನ್ನೊಬ್ಬ ಪುತ್ರ ಸಂಕಲ್ಪ ಶೆಟ್ಟರ್‌ಗೆ .50.11 ಲಕ್ಷ, ಸಹೋದರ ಮೋಹನ ಶೆಟ್ಟರ್‌ಗೆ .35.25 ಲಕ್ಷ ಸಾಲವನ್ನು ಶೆಟ್ಟರ್‌ ನೀಡಿದ್ದಾರೆ. ಇನ್ನು ಇವರ ಪತ್ನಿ ಶಿಲ್ಪಾ ಶೆಟ್ಟರ್‌ ತಮ್ಮ ಪುತ್ರ ಪ್ರಶಾಂತ ಶೆಟ್ಟರ್‌ಗೆ .4.80 ಲಕ್ಷ, ಇನ್ನೊಬ್ಬ ಪುತ್ರ ಸಂಕಲ್ಪಗೆ .20 ಸಾವಿರ ಸಾಲ ಕೊಟ್ಟಿದ್ದಾರೆ.

.20.59 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಶೆಟ್ಟರ್‌ ಹೆಸರಲ್ಲಿದ್ದರೆ, ಪತ್ನಿ ಹೆಸರಲ್ಲಿ .32.10 ಲಕ್ಷ ಮೌಲ್ಯದ ಚಿನ್ನಾಭರಣ, .1.38 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳಿವೆ. ಎಲ್‌ಐಸಿ ಸೇರಿದಂತೆ ಶೆಟ್ಟರ್‌ ಹೆಸರಲ್ಲಿ .10.26 ಲಕ್ಷ ಮೌಲ್ಯದ ಪಾಲಿಸಿಗಳಿದ್ದರೆ, ಪತ್ನಿ ಹೆಸರಲ್ಲಿ .8.65 ಲಕ್ಷ ಮೌಲ್ಯ ಪಾಲಿಸಿಗಳನ್ನು ಮಾಡಿಸಲಾಗಿದೆ. ಶೆಟ್ಟರ್‌ ಬಳಿ .3.51 ಲಕ್ಷ ನಗದು ಇದ್ದರೆ, ಪತ್ನಿ ಶಿಲ್ಪಾ ಶೆಟ್ಟರ್‌ ಬಳಿ .85 ಸಾವಿರ ನಗದು ಕೈಯಲ್ಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

loader