ಸಿಎಂ, ಸಚಿವರ ಆಪ್ತರ ಮನೆಯಲ್ಲಿ 6.76 ಕೋಟಿ ರೂ. ಪತ್ತೆ

ಬೆಂಗಳೂರು(ಏ.26): ಸಿಎಂ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರ ಆಪ್ತ ಮರಿಸ್ವಾಮಿ ಮನೆಯಲ್ಲಿ 6.76 ಕೋಟಿ ರೂ. ನಗದು ಪತ್ತೆಯಾಗಿದೆ.

ಮರಿಸ್ವಾಮಿ ಮನೆಯ ಮೇಲೆ ಐಟಿ ದಾಳಿ ನಡೆದಾಗ 6.76 ಕೋಟಿ ರೂ. ನಗದು ಹಾಗೂ ಸುಮಾರು ಕೊಟ್ಯಂತರ ರೂ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಲೋಕೋಪಯೋಗಿ ಸಚಿವರಿಗೆ ಆಪ್ತರಾಗಿರುವ ಮರಿಸ್ವಾಮಿ ಮುಖ್ಯಮಂತ್ರಿ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಪರಮಾಪ್ತರು. ಬಹಳ ಚೆನ್ನಾಗಿ ಮಾಂಸದ ಅಡುಗೆ ಮಾಡುವ ಮರಿಸ್ವಾಮಿ ಸಿದ್ದರಾಮಯ್ಯ ಸಿಎಂ ಆದ ನಂತರ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.  

ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಗೆ ಐಟಿ ಇಲಾಖೆ ಪತ್ರ ಬರೆದಿತ್ತು. ಕಳೆದ ಮೂರು ದಿನಗಳಿಂದ ಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Comments 0
Add Comment