ಮೈಸೂರು (ಏ. 22): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಿರುಸಿನ ಪ್ರಚಾರ ಜೋರಾಗಿದೆ.  ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿಯಲ್ಲಿ ಜಿ.ಟಿ.ದೇವೆಗೌಡ ಪರವಾಗಿ ಎಚ್’ಡಿಕೆ  ಪ್ರಚಾರ ನಡೆಸುತ್ತಿದ್ದಾರೆ. 

ಸಿಎಂ ’ಬಾದಾಮಿ’ ಯನ್ನಾದರೂ ಹುಡುಕಿಕೊಂಡು ಹೋಗಲಿ ಅಥವಾ ಗೊಡಂಬಿಯನ್ನಾದರು ಹುಡುಕಿಕೊಂಡು ಹೋಗಲಿ.  ಅವರಪ್ಪನ ಆಣೆ ಅವರು ಎರಡು ಕಡೆಯೂ ಗೆಲ್ಲಲ್ಲ. ತಾಯಿ ಚಾಮುಂಡೇಶ್ವರಿ ತಾಯಿ ಹಾಗೂ ಬನಶಂಕರಿ ದೇವಿ ಆಶಿರ್ವಾದ ನಮ್ಮ ಮೇಲಿದೆ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಇಲ್ಲ ಎಂಬುದು ಗೊತ್ತಾಗಿ ಬನಶಂಕರಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಅಲ್ಲಿ ಅವರಿಗೆ ಗೆಲುವು ಸಿಗಲ್ಲ ಎಂದು ಎಚ್’ಡಿಕೆ ಹೇಳಿದ್ದಾರೆ. 

ಜಿ.ಟಿ.ದೆವೇಗೌಡ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ರೇವಣ್ಣ ಸಿದ್ದಯ್ಯ ನಮ್ಮ ಜಿಟಿಡಿಗೆ ಬೆಂಬಲ ಸೂಚಿಸಿರುವುದಕ್ಕೆ ನಾನು ಆಬಾರಿಯಾಗಿದ್ದೇನೆ.  ಇದು ನಾನು ಚಾಮುಂಡೇಶ್ವರಿ ಕ್ಷೇತ್ರದ ಕೊನೆಯ ಪ್ರಚಾರ ಎಂದು  ಎಚ್’ಡಿಕೆ ಹೇಳಿದ್ದಾರೆ.