ನಮ್ಮನ್ನು ಗೆಲ್ಲಿಸದಿದ್ದರೆ ನಾನು ಬದುಕಿರುವುದಿಲ್ಲ

ಬೆಂಗಳೂರು(ಮೇ.10): ನಾನು ಬದುಕಿರಬೇಕೆಂದರೆ ನಮ್ಮ ಪಕ್ಷವನ್ನು ಗೆಲ್ಲಿಸಿ. ಇಲ್ಲದಿದ್ದರೆ ನಾನು ತುಂಬ ದಿನ ಬದುಕಿರುವುದಿಲ್ಲ. ನನ್ನನ್ನು ಬದುಕಿಸಿ ನೀವು ಬದುಕಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ರಾಜರಾಜೇಶ್ವರಿ ಕ್ಷೇತ್ರದ ಲಗ್ಗೆರೆಯಲ್ಲಿ ರೋಡ್ ಶೋ ನಡೆಸಿ ಮಾತನಾಡಿ, ಅಭ್ಯರ್ಥಿಗಳೆಲ್ಲರೂ ದುಡ್ಡು ದುಡ್ಡು ಎಂದು ಕೂತಿದ್ದಾರೆ. ನಾನು ಎಲ್ಲಿಂದ ತರಲಿ. ನಾನು ಚೆಂದ ಎತ್ತಿ ಹಣ ಕೊಡಬೇಕಿದೆ. ಈ ಬಾರಿ ನನನ್ನನ್ನು ಚುನಾಯಿಸಿ ಎಂದು  ಮನವಿ ಮಾಡಿದರು.

Comments 0
Add Comment