ಸಂವಿಧಾನದ ಪ್ರಕಾರ ನಿರ್ಧಾರ : ಉಭಯ ನಾಯಕರಿಗೆ ರಾಜ್ಯಪಾಲರ ಭರವಸೆ

ಬೆಂಗಳೂರು(ಮೇ.16): ಸರ್ಕಾರ ರಚನೆಗೆ ಸಂವಿಧಾನದ ಪ್ರಕಾರ ನಿರ್ಣಯ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.
117 ಶಾಸಕರ ಸಂಖ್ಯೆ ಬಲದೊಂದಿಗೆ ರಾಜ್ಯಭವನದಲ್ಲಿ ಪರೇಡ್ ನಡೆಸಿದ ನಂತರ ಶಾಸಕರ ಸಹಿಯಿರುವ ಪತ್ರವನ್ನು ನೀಡಿ ಸರ್ಕಾರ ರಚಿಸಲು ಅವಕಾಶ ನೀಡಲು ಉಭಯ ನಾಯಕರು ಮನವಿ ಮಾಡಲಾಗಿದೆ.  ಗೋವಾ, ಮಿಜೋರಾಂ, ಮೇಘಾಲಯ ರಾಜ್ಯಗಳ ಉದಾಹರಣೆಯನ್ನು ರಾಜ್ಯಪಾಲರಿಗೆ ವಿವರಣೆ ನೀಡಲಾಗಿದ್ದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿರುವುದಾಗಿ  ಇಬ್ಬರು ನಾಯಕರು ತಿಳಿಸಿದರು.

Comments 0
Add Comment