ಮಾತಿನ ಭರದಲ್ಲಿ ಡಿಕೆಶಿ ಎಡವಟ್ಟು

ಬೆಂಗಳೂರು(ಮೇ.26): ಮಾತಿನ ಭರದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಒಂದು ದೊಡ್ಡ ಪಕ್ಷ. ರಾಜ್ಯದಲ್ಲಿ ಸೆಕ್ಯುಲರ್ ಸರಕಾರ ಬರಬಾರದು ಅಂತ ಹೃದಯ ಶ್ರೀಮಂತಿಕೆ ತೋರಿಸಿ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ. ಇದೀಗ ಜಾತ್ಯಾತೀತ ಜನತಾ ದಳ ಸಹ ಆರ್ ಆರ್ ನಗರದಲ್ಲಿ ನಮ್ಮ ಅಭ್ಯರ್ಥಿಗೆ ಪ್ರೋತ್ಸಾಹ ನೀಡಬೇಕು ಎಂದ ಡಿಕೆಶಿ ಕಮ್ಯೂನಲ್ ಎನ್ನುವ ಬದಲು ಸೆಕ್ಯುಲರ್ ಎಂದು ಬಾಯ್ತಪ್ಪಿ ಹೇಳಿದರು.

Comments 0
Add Comment