ವಿಶ್ವಾಸಮತ ಯಾಚನೆ ವೇಳೆ ಡಿಕೆಶಿ-ರೇವಣ್ಣ ಫೈಟ್?

ಶನಿವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆ ಅಧಿವೇಶನದ ಬಳಿಕ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣ  ಜಗಳವಾಡಿಕೊಂಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜತೆಗೆ, ಅಧಿವೇಶನ ಮುಗಿದ ಬಳಿಕ ಹತ್ತೇ ನಿಮಿಷಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬಣ್ಣ ಬಯಲಾಯ್ತು ಎಂದು ಬರೆಯಲಾಗಿದೆ. ಆದರೆ ವಾಸ್ತವದಲ್ಲಿ ಈ ವಿಡಿಯೋ ನಿನ್ನೆಯದಲ್ಲ, ಬದಲಾಗಿ 2016ರಲ್ಲಿ ನಡೆದ ಘಟನೆಯದ್ದಾಗಿದೆ. 

Comments 0
Add Comment