ಈ ಗ್ರಾಮದಲ್ಲಿ ಕಾಂಗ್ರೆಸ್ಸಿಗರಿಗೆ ಪ್ರವೇಶವಿಲ್ಲ!

First Published 23, Apr 2018, 12:46 PM IST
Congress people are  not allowed to this Village
Highlights

ಕನ್ಯಾನ ಗ್ರಾಮದಲ್ಲಿ ಕಾಂಗ್ರೆಸ್ಸಿಗರಿಗೆ ಮನೆಗೆ ಪ್ರವೇಶವಿಲ್ಲ ಅನ್ನೋ ಬೋರ್ಡ್ ಗಳನ್ನ ಹಾಕಲಾಗಿದ್ದು, ಓಟು ಕೇಳಲು ಬರಬೇಡಿ ಅಂತ ಬರೆಯಲಾಗಿದೆ.

ಸುಮಾರು ಒಂದು ವರ್ಷದ  ಹಿಂದೆ ಬಂಟ್ವಾಳ ತಾಲೂಕಿನ  ಕನ್ಯಾನದ ಗಣ್ಯಶ್ರೀ ಅನ್ನೋ ಹುಡುಗಿಯನ್ನು ಕಪಟ ಪ್ರೇಮದ ಮೂಲಕ ಮತಾಂತರ ಮಾಡಲು ಸಹಕರಿಸಿದ ಬಂಟ್ವಾಳದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಕನ್ಯಾನದ ಆಸುಪಾಸಿನ ಎಲ್ಲ ಹಿಂದೂ ಕಾರ್ಯಕರ್ತನ ಮನೆಯಲ್ಲಿ ಈ ಪೋಸ್ಟರು ಹಾಕುವಂತೆ ಸೂಚಿಸಲಾಗಿದೆ. 

ಬಂಟ್ವಾಳ (ಏ. 23): ಕನ್ಯಾನ ಗ್ರಾಮದಲ್ಲಿ ಕಾಂಗ್ರೆಸ್ಸಿಗರಿಗೆ ಮನೆಗೆ ಪ್ರವೇಶವಿಲ್ಲ ಅನ್ನೋ ಬೋರ್ಡ್ ಗಳನ್ನ ಹಾಕಲಾಗಿದ್ದು, ಓಟು ಕೇಳಲು ಬರಬೇಡಿ ಅಂತ ಬರೆಯಲಾಗಿದೆ.

ಸುಮಾರು ಒಂದು ವರ್ಷದ  ಹಿಂದೆ ಬಂಟ್ವಾಳ ತಾಲೂಕಿನ  ಕನ್ಯಾನದ ಗಣ್ಯಶ್ರೀ ಅನ್ನೋ ಹುಡುಗಿಯನ್ನು ಕಪಟ ಪ್ರೇಮದ ಮೂಲಕ ಮತಾಂತರ ಮಾಡಲು ಸಹಕರಿಸಿದ ಬಂಟ್ವಾಳದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ. ಕನ್ಯಾನದ ಆಸುಪಾಸಿನ ಎಲ್ಲ ಹಿಂದೂ ಕಾರ್ಯಕರ್ತನ ಮನೆಯಲ್ಲಿ ಈ ಪೋಸ್ಟರು ಹಾಕುವಂತೆ ಸೂಚಿಸಲಾಗಿದೆ. 

ವೋಟಿಗಾಗಿ ಮುಸ್ಲಿಮರನ್ನು ಓಲೈಸುವ ಕಪಟ  ಕಾಂಗ್ರೆಸ್ ನಾಯಕರಿಗೆ ಚುನಾವಣೆಗೆ ಬಂದಾಗ ಮಾತ್ರ ಹಿಂದೂಗಳ ಮನೆ ನೆನಪಾಗುತ್ತದೆ. ಈ ಸಲ ನಿಮ್ಮ ಆಟ ನಡೆಯಲ್ಲ ಅಂತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಕ್ಷೇತ್ರ ಉಸ್ತುವಾರಿ ಸಚಿವ ರಮಾನಾಥ್ ರೈಯವರ ವ್ಯಾಪ್ತಿಗೆ ಸೇರುತ್ತೆ. ಈ ಗ್ರಾಮದ ಗ್ರಾಮಸ್ಥರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. 
 
loader