ನಾಮಪತ್ರ ಸಲ್ಲಿಕೆ ವೇಳೆ ಜನ ಸೇರಿಸಲು ಹಣ ನೀಡಿದ ’ಕೈ’ ಶಾಸಕ

ಬೀದರ್ (ಏ. 29):  ನಾಮಪತ್ರದ ಸಲ್ಲಿಕೆ ವೇಳೆ  ಮೆರವಣಿಗೆಯಲ್ಲಿ ಭಾಗವಹಿಸಲು ಬಂದವರಿಗೆ ಬೀದರ್ ಶಾಸಕ ರಹೀಂಖಾನ್  ಹಣ ಹಂಚಿರುವ ವಿಡಿಯೋ ವೈರಲ್ ಆಗಿದೆ. 

ಬೀದರ್ ಉತ್ತರ ಕಾಂಗ್ರೆಸ್ ಅಭ್ಯರ್ಥಿ ರಹಿಂಖಾನ್ ಬೆಂಬಲಿಗರನ್ನು ಗಡಿಪಾರು ಮಾಡಲಾಗಿದೆ.  ಇಬ್ಬರು ಕಾಂಗ್ರೆಸ್ ಮುಖಂಡರದ ಬಸವರಾಜ ಬುಯ್ಯ ಹಾಗೂ ವಿಠ್ಠಲ ಎಂಬಾತರ ಮೇಲೆ ಚುನಾವಣಾ ಅಕ್ರಮ ಕೇಸ್ ದಾಖಲು ಮಾಡಲಾಗಿದೆ. 
ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜನರಿಗೆ 500 ರುಪಾಯಿ ಮುಖ ಬೆಲೆಯ ನೋಟಿನ ಕಂತೆ ಹಿಡಿದುಕೊಂಡು  ಬೀದರ್ ನಗರದ ಗಣೇಶ ಮೈದಾನದಲ್ಲಿ ಬಹಿರಂಗವಾಗಿಯೇ ಹಣ ಹಂಚುತ್ತಿದ್ದ ಕೈ ನಾಯಕರ ಕೃತ್ಯದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಬ್ಬರು ಆರೋಪಿಗಳನ್ನ ಗಡಿಪಾರು ಮಾಡಲು ಕ್ರಮ ಕೈಗೊಂಡಿರುವುದಾಗಿ ಜಿ.ಪಂ ಸಿಇಓ ಸೇಲ್ವಮಣಿ ಹೇಳಿದ್ದಾರೆ. 

Comments 0
Add Comment