ಶಾ- ಹೆಚ್ಡಿಕೆ ಭೇಟಿ ನಿಜ;ನಾಮಪತ್ರದಲ್ಲೂ ಜೈನ್ ಎಂದು ದಾಖಲು

ವಿಜಯಪುರ(ಏ.30): ಅಮಿತ್ ಶಾ- ಕುಮಾರಸ್ವಾಮಿ ದೆಹಲಿಯಲ್ಲಿ ಭೇಟಿಯಾಗಿದ್ದು ಸತ್ಯ. ದೆಹಲಿಯಲ್ಲಿ ಇಬ್ಬರು ನಾಯಕರು ಭೇಟಿ ಮಾಡಿದ್ದು ನಿಜ ಎಂದು ವಿಜಯಪುರದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಟಿಕೆಟ್​​ನಲ್ಲಿ ಕುಮಾರಸ್ವಾಮಿ ಹೆಸರು ಹೇಗೆ ಬಂತು? ನನಗಿರುವ ಮಾಹಿತಿ ಪ್ರಕಾರ ಇಬ್ಬರೂ ಭೇಟಿ ಮಾಡಿದ್ದಾರೆ. ಆದರೀಗ ಭೇಟಿಯಾಗಿಲ್ಲ ಎನ್ನುತ್ತಾರೆ. ಹೋಗಲಿ ಬಿಟ್ಟು ಬಿಡಿ.ಸತ್ಯವನ್ನು ಬಿಜೆಪಿ ಯಾವುತ್ತೂ ಒಪ್ಪಿಕೊಳ್ಳಲ್ಲ. ಅಮಿತ್ ಅವರು ಜೈನ್ ಆಗಿದ್ದರೂ ಹಿಂದೂ ಅಂತ ಹೇಳ್ತಾರೆ. ಜೈನ್ ಎಂಬುದನ್ನೂ ಅಮಿತ್ಶಾ ಒಪ್ಪಿಕೊಳ್ಳಲ್ಲ. ಇದೇ ಸಂದರ್ಭದಲ್ಲಿ ಪ್ರಕಾಶ್ ರೈ ಅಭಿವ್ಯಕ್ತ ಸ್ವಾತಂತ್ರದ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು.

Comments 0
Add Comment