ಮತ ಹಾಕದವರ ಕೈಕಾಲು ಕಟ್ಟಿಕೊಳ್ಳಿ ಎಂದ ಬಿಎಸ್'ವೈ
5, May 2018, 3:38 PM IST
ಬೆಳಗಾವಿ(ಮೇ.05): ವೋಟು ಹಾಕಲ್ಲವೆನ್ನುವ ಮತದಾರರ ಕೈ, ಕಾಲಿಗೆ ಮುಗಿದು ವೋಟನ್ನು ಹಾಕಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದರು. ಈಗ ಮೈ ಮರೆತು ಸಭೆ ಸಮಾರಂಭಗಳನ್ನೆಲ್ಲಾ ಮಾಡಿಕೊಂಡು ಕುಳಿತುಕೊಳ್ಳಬಾರದು. ಇನ್ನು ಐದಾರು ದಿವಸ ಮನೆಮನೆಗೆ ಹೋಗಿ ಮತದಾರರನ್ನು ಮನವೊಲಿಸಬೇಕಾಗಿದೆ. ನಮಗೆ ಯಾರು ವೋಟು ಕೊಡಲ್ಲ ಅನ್ನಿಸುತ್ತದೆಯೋ ಅವರಿಗೆಲ್ಲಾ ಮನವಿ ಮಾಡಿ. ಮತದಾರರ ಕೈಕಾಲುಕಟ್ಟಿ ಅಂದರೆ ಕೈ ಕಾಲು ಮುಗಿದು ಕೇಳಿ ಎಂದ ಯಡಿಯೂರಪ್ಪ ಮಹಾಂತೇಶ್ ದೊಡ್ಡಗೌಡರ ಅವರನ್ನು ಗೆಲ್ಲಿಸಿಕೊಡಬೇಕು ಎಂದರು.