ಬಿಜೆಪಿ ನಾಲ್ಕನೇ ಪಟ್ಟಿ ಪ್ರಕಟ; ನಟ ಜಗ್ಗೇಶ್’ಗೆ ಟಿಕೆಟ್

BJP Releases 4th List for Assembly Elections
Highlights

  • ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
  • ಬಾಕಿ ಉಳಿದಿದ್ದ 11 ಕ್ಷೇತ್ರಗಳ ಪೈಕಿ 7ಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

 

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ 4ನೇ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ 11 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪಕ್ಷವು ಅಂತಿಮಗೊಳಿಸಿದೆ. ನಟ ಜಗ್ಗೇಶ್’ಗೆ ಯಶವಂತಪುರದಿಂದ ಟಿಕೆಟ್ ನೀಡಲಾಗಿದೆ.  

ಬಾದಾಮಿ, ಸಕಲೇಶಪುರ, ಶಿಡ್ಲಘಟ್ಟ, ವರುಣಾ ಕ್ಷೇತ್ರಕ್ಕೆ ಇನ್ನೂ ಯಾರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿಲ್ಲ. ವರುಣಾ ಕ್ಷೇತ್ರದಲ್ಲಿ ತನ್ನ ಪುತ್ರ ವಿಜಯೇಂದ್ರ ಸ್ಪರ್ಧಿಸಲ್ಲವೆಂದು ಯಡಿಯೂರಪ್ಪ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಶ್ರೀರಾಮುಲು ಹೆಸರು ಬಾದಾಮಿಯಿಂದ ಕೇಳಿಬಂದಿದೆ

 

loader