ಬೆಂಗಳೂರು (ಏ. 23): ನಾಮಪತ್ರ ಸಲ್ಲಿಸಲು ಒಂದೇ ಒಂದು ದಿನ ಬಾಕಿಯಿದೆ.  ಇನ್ನೂ ರೆಬಲ್ ಟ್ರಬಲ್ ಮುಗಿದಿಲ್ಲ.  ಮೂರು ದಿನಗಳಿಂದ ಸಿಎಂ ಮಾಡುತ್ತಿರುವ ಮನವೊಲಿಕೆಗೆ  ಅಂಬರೀಶ್ ಒಪ್ಪುತ್ತಿಲ್ಲ.  

ಚುನಾವಣೆಗೆ ನಿಲ್ಲಲು ಹಣದ ತೊಂದರೆ ಎಂದಿದ್ದಾರೆ.  ನಿನ್ನೆ ಅಂಬಿ ಸಿಎಂ ಭೇಟಿ‌ ಮಾಡದೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.  

ಇಂದು ಅಂಬರೀಶ್ ಇಲ್ಲವೇ ಅಮರಾವತಿ ಅನ್ನೋದು ನಿರ್ಧಾರವಾಗಲಿದೆ. ಪರಮೇಶ್ವರ್ ಮತ್ತು ಸಿದ್ದರಾಮಯ್ಯಗೆ ಅಮರಾವತಿಗೆ  ಟಿಕೆಟ್ ಕೊಡಲು ಮನಸಿಲ್ಲ.  ಹೀಗಾಗಿ ಅಂಬಿಯನ್ನೇ ನಿಲ್ಲಿಸುವುದಕ್ಕೆ ಸಿಎಂ ಪಟ್ಟು ಹಿಡಿದಿದ್ದಾರೆ. ಚಾಮುಂಡೇಶ್ವರಿಗೆ ಅಂಬರೀಶ್ ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಲು ಸಿಎಂ ಪ್ಲಾನ್ ಮಾಡಿದ್ದಾರೆ.  ಜಪ್ಪಯ್ಯ ಅಂದ್ರು ಬೇಡ ಅಂತಿದ್ದಾರೆ ಅಂಬಿ!