ಜೆಡಿಎಸ್ ಶಾಸಕನ ಕಾರಲ್ಲಿ ಬಂದು ಮತದಾನ ಮಾಡಿದ ಅಂಬಿ

ಮಂಡ್ಯ(ಮೇ.12): ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಅವರು ಮದ್ದೂರಿನ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರ ಕಾರಿನಲ್ಲಿಆಗಮಿಸಿ ಹುಟ್ಟೂರು ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಅಂಬರೀಶ್ ಅವರಿಗೆ ಈ ಮೊದಲು ಕಾಂಗ್ರೆಸ್'ನಿಂದ ಮಂಡ್ಯ ನಗರ ಕ್ಷೇತ್ರದಲ್ಲಿ  ಟಿಕೆಟ್ ನೀಡಲಾಗಿತ್ತು. ಆದರೆ ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.   

Comments 0
Add Comment