ಉಚಿತವಾಗಿ ಡೇಟಾ ಎಂಟ್ರಿ ಆಪರೇಟಿಂಗ್ ತರಬೇತಿಗೆ ಅರ್ಜಿ ಆಹ್ವಾನ; ಜು.06 ಕೊನೇ ದಿನ

ಸಮಾಜ ಕಲ್ಯಾಣ ಇಲಾಖೆಯಿಂದ ನಿರುದ್ಯೋಗ ಯುವಕ  ಮತ್ತು ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ (ತಾಂತ್ರಿಕ ನೈಪುಣ್ಯತೆ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Social welfare department Application Invitation for Free Data Entry Operating Training sat

ಬೆಂಗಳೂರು (ಜೂ.15): ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯ ಹಾಗೂ ಅರಣ್ಯ ಆಧಾರಿತ  ಆದಿವಾಸಿ ಸಮುದಾಯದ ನಿರುದ್ಯೋಗ ಯುವಕ  ಮತ್ತು ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ (ತಾಂತ್ರಿಕ ನೈಪುಣ್ಯತೆ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಹು ಕೌಶಲ್ಯ ತಂತ್ರಜ್ಞ  (ವಿದ್ಯುತ್) (MULTI SKILL TECHNICIAN (ELECTRICAL) ಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು,. ಸ್ವಯಂ ಉದ್ಯೋಗದ ಟೈಲರ್ (SELF EMPLOYED TAILOR)ಗೆ  8ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಬೇಕು., ಸಹಾಯಕ ಸೌಂದರ್ಯ ಚಿಕಿತ್ಸಕ (ASSISTANT BEAUTY THERAPIST) ಗೆ 8ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಬೇಕು ಮತ್ತು ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್  (DATA ENTRY OPERATOR) ಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು18-46 ವಯೋಮಿತಿಯೊಳಗಿರಬೇಕು. ಎರಡು ತಿಂಗಳ ಅವಧಿ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ಜಾತಿ  ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಪತ್ರ ಮತ್ತು ವಿದ್ಯಾರ್ಹತೆ ಪ್ರಮಾಣ ಪತ್ರ ಹೊಂದಿರಬೇಕು.

Bengaluru: ಬಿಡಿಎ ಫ್ಲ್ಯಾಟ್ ಖರೀದಿಸಿದ ಮರುಕ್ಷಣವೇ 150 ಮಂದಿಗೆ ಹಂಚಿಕೆ ಪತ್ರ ಕೊಟ್ಟ ಪ್ರಾಧಿಕಾರ

ಆಸಕ್ತರು  ನಿಗಧಿತ  ಅರ್ಜಿ ನಮೂನೆಗಳನ್ನು ಜಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ನಂ.21/1,1ನೇ ಮಹಡಿ, ಜೆಲ್ಲೇಟಾ ಟವರ್ಸ್, ಮಿಷನ್ ರಸ್ತೆ, ಸಂಪಂಗಿರಾಮನಗರ (ಸುಬ್ಬಯ್ಯ ಸರ್ಕಲ್), ಬೆಂಗಳೂರು-560027  ಇಲ್ಲಿ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು  ಸೂಕ್ತ ದಾಖಲಾತಿಗಳೊಂದಿಗೆ ಜುಲೈ 06ರೊಳಗೆ  ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22240449, 22240999 ಗೆ ಸಂರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಅಧಿಕಾರೇತರ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ : ಬೆಂಗಳೂರು ನಗರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರು ದಕ್ಷಿಣ ಕಂದಾಯ  ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ರಚಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳ ಬಗ್ಗೆ ಅರಿವಿರುವ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಎರಡು ಅಧಿಕಾರೇತರ ಸದಸ್ಯರನ್ನು  ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ  ಸಮುದಾಯದ ಸರ್ವತೋಮುಖ  ಅಭಿವೃದ್ಧಿಗಾಗಿ ಶ್ರಮಿಸಿದ ಎನ್.ಜಿ.ಓ ರೊಂದಿಗೆ ಸಂಪರ್ಕ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡೇತರ  ಇಬ್ಬರ ಸದ್ಯಸರನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸರ್ಕಾರದಿಂದ ಕಾನೂನು ಪದವೀಧರರ ತರಬೇತಿಗಾಗಿ ಅರ್ಜಿ ಆಹ್ವಾನ

ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಜಾತಿ ಪ್ರಮಾಣ, ಆಧಾರ್ ಪ್ರತಿ  ಮತ್ತು ಇತ್ಯಾಧಿ ವಿವರಗಳೊಂದಿಗೆ ಅರ್ಜಿಯನ್ನು  ಜುಲೈ 03 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಎಸ್ ಕರಿಯಪ್ಪ ರಸ್ತೆ, ಕನಕಪುರ ಮುಖ್ಯರಸ್ತೆ, ಬೆಂಗಳೂರು-07 ಅಥವಾ  ದೂರವಾಣಿ ಸಂಖ್ಯೆ: 080-26711096 ಗೆ ಎಂದು ಸಮಾಜ ಕಲ್ಯಾಣ ಇಲಾಖೆಯ  ಸಹಾಯಕ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios